ಬಹು ನಿರೀಕ್ಷೆಯಿಂದ ಕಾಯ್ತಿದ್ದ ಗೃಹಲಕ್ಷ್ಮೀ ಯೋಜನೆಗೂ ಈಗ ಸಮಸ್ಯೆ ಎದುರಾಗಿದೆ. ಗೃಹಲಕ್ಷ್ಮೀಗೆ ಯಾವುದೇ ತೊಡಕಾಗಬಾರದೆಂದು ಕೊಂಚ ಲೇಟಾಗಿ ಚಾಲನೆ ನೀಡಲಾಗುತ್ತಿದ್ದು, ಪ್ರತ್ಯೇಕ ಅಪ್ ರೆಡಿ ಮಾಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾಯ್ತಾ ಇದ್ರೂ. ಕೊನೆಗೂ ಅರ್ಜಿ ಆರಂಭವಾಗಿದ್ರು ಸರ್ವರ್ ಕಾಟ ತಪ್ಪುತ್ತಿಲ್ಲ. ಇಷ್ಟು ದಿನ ಗೃಹಜ್ಯೋತಿ ಆಯ್ತು ಇದೀಗ ಮನೆಯೊಡತಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಸರ್ವರ್ ಸಮಸ್ಯೆ ಕಾಡ್ತಿದೆ.
ಮೊದಲ ದಿನ ಹೆಚ್ಚು ಸೇವಾಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯಾಗಿದ್ದ ಹಿನ್ನೆಲೆ ಮಹಿಳೆಯರು ಪರದಾಡಿದ್ರು. ಮೊದಲ ದಿನ 77 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದ್ದು, ಗೃಹಲಕ್ಷ್ಮಿ ಯೋಜನೆ 2ನೇ ದಿನದ ಅಂತ್ಯಕ್ಕೆ 8,81,639 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನು ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಕೆಲವು ಕಡೆ ಸರ್ವರ್ ಸಮಸ್ಯೆ ಬಗೆ ಹರಿದು ಅರ್ಜಿ ಸಲ್ಲಿಕೆ ಸ್ಪೀಡ್ ಆಗಿತ್ತು. ಆದ್ರೆ ಮುರನೇ ದಿನ ಸರ್ವರ್ ಸಮಸ್ಯೆ ಮತ್ತೆ ತಲೆದೋರಿದೆ. ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಇಲಾಖೆಯಿಂದ ಯಾವುದೇ ಗಡುವು ಇಲ್ಲ. ಮಹಿಳೆಯರು ನಿಗದಿ ಪಡಿಸಿದ ದಿನಾಂಕಗಳಂದು ಸೇವಾ ಕೇಂದ್ರಕ್ಕೆ ಹಾಜರಾಗುವಂತೆ ಸೇವಾ ಕೇಂದ್ರಗಳ ಅಧಿಕಾರಿಗಳು ಕೂಡ ಮನವಿ ಮಾಡಿದ್ದಾರೆ. ಇನ್ನು ಸರ್ವರ್ ಕಾಟದಿಂದ ಯಾವ ಕೆಲಸಕ್ಕೂ ಹೋಗದೇ ಬೆಂಗಳೂರು ಒನ್‌ನಲ್ಲಿಯೇ ಮಹಿಳೆಯರು ಕಾದು ಕುಳಿತಿದ್ದು, ಯಜಮಾನಿಯರು ಹೈರಾಣಾಗಿದ್ದಾರೆ.