ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿತ್ತು. ಅದರಲ್ಲಿ ಒಂದಾದ ಶಕ್ತಿ ಯೋಚನೆ ಅಡಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಇನ್ನು ಶಕ್ತಿ ಯೋಜನೆ ಜಾರಿಯಿಂದಾಗಿ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರ ಓಡಾಟದ ಪ್ರಮಾಣ ಹೆಚ್ಚಾಗಿದ್ದರಿಂದ. ಮಹಿಳೆಯರು ಆಟೋ ಹಾಗೂ ಖಾಸಗಿ ಬಸ್ ಬಿಟ್ಟು ಸರಕಾರಿ ಬಸ್ ಗಳ ಮೊರೆ ಹೋಗಿದ್ದು, ಆಟೋ, ಟ್ಯಾಕ್ಸಿ, ಓಲ, ಉಬರ ಗಳತ್ತ ಜನ ಬರುತ್ತಿಲ್ಲ, ಹೀಗಾಗಿ ಖಾಸಗಿ ವಾಹನ ಚಾಲಕರ ಕುಟುಂಬಗಳು ಬೀದಿಗೆ ಬರುತ್ತದೆ ಎಂದು ಸರ್ಕಾರದ ವಿರುದ್ಧ ಖಾಸಗಿ ಚಾಲಕರು ಜುಲೈ 27ರಂದು ಹೋರಾಟಕ್ಕಿಳಿಯಲು ಮುಂದಾಗಿದ್ದಾರೆ.
ಇನ್ನೂ ಖಾಸಗಿ ಸಾರಿಗೆ ಬಂದ್ ಘೋಷಣೆ ಬೆನ್ನಲ್ಲೇ ಸಾರಿಗೆ ಇಲಾಖೆ ಸಭೆ ಕರೆದಿದೆ. ಜಲೈ27 ರಂದು ಆಟೋ, ಟ್ಯಾಕ್ಸಿ ಮತ್ತು ಖಾಸಗಿ ಬಸ್ ಅಸೋಸಿಯೇಷನ್ ಬೆಂಗಳೂರು ಬಂದ್ ಗೆ ಕರೆ ನೀಡಿದೆ. ಈ ಹಿನ್ನೆಲೆ ಜಲೈ 24 ರಂದು ಬೆಳಗ್ಗೆ 11 ಗಂಟೆಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಭೆ ಕರೆಯಲ್ಲಾಗಿದೆ. ಶಾಂತಿನಗರದ ಆರ್ ಟಿ ಓ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮತ್ತು ಖಾಸಗಿ ಬಸ್ ಗಳ ಮಾಲೀಕರು ಹಾಗೂ ಚಾಲಕರು ಸಭೆಗೆ ಆಹ್ವಾನ ಮಾಡಿದ್ದಾರೆ. 35 ಸಂಘಟನೆಗಳ ಅಧ್ಯಕ್ಷರನ್ನು ಸಭೆಗೆ ಆಹ್ವಾನಿಸಲಾಗಿದ್ದು, ಶಕ್ತಿ ಯೋಜನೆ, ರ್ಯಾಪಿಡೋ ಬೈಕ್ ಟ್ಯಾಕ್ಸಿಯಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಈ ಸಂಬಂಧ ಹಲವು ಸಂಘಟನೆಗಳು ಖಾಸಗಿ ಸಾರಿಗೆ ಬಂದ್ ಗೆ ಕರೆ ನೀಡಿದ್ದಾರೆ ಹಿನ್ನಲೆ ಸಾರಿಗೆ ಇಲಾಖೆ ಸಭೆ ನಡಿಸೊಕ್ಕೆ ಮುಂದಾಗಿದೆ.