ಬಹುಕೋಟಿ ವಂಚನೆಯ ಐಎಂಎ ಸಂಸ್ಥೆಯ ಕೇಸ್ ವಿಚಾರಣೆಗಾಗಿ ಎಸ್ ಐ ಟಿ ಎರಡು ಬಾರಿ ನೋಟಿಸ್ ಜಾರಿಮಾಡಿದರೂ ರೋಷನ್ ಬೇಗ್ ಹಾಜರಾಗಿಲ್ಲ.
ಪ್ರಕರಣದ ವಿಚಾರಣೆ ನಡೆಸುತ್ತಿರೋ ವಿಶೇಷ ತನಿಖಾ ತಂಡದ ಅಧಿಕಾರಿಗಳ ಹತ್ತಿರ ವಿಚಾರಣೆಗೆ ಹಾಜರಾಗೋದಕ್ಕೆ ಸಧ್ಯಕ್ಕೆ ಆಗುತ್ತಿಲ್ಲ. ಹೀಗಾಗಿ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.
ಜುಲೈ 11 ರಂದು ರೋಷನ್ ಬೇಗ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಮತ್ತೊಮ್ಮೆ ನೊಟೀಸ್ ಜಾರಿ ಮಾಡಿದೆ. ತಮ್ಮ ಸಹಾಯಕನ ಮೂಲಕ ಎಸ್ ಐ ಟಿ ಅಧಿಕಾರಿಗಳಿಗೆ ಮನವಿ ಪತ್ರವನ್ನು ರೋಷನ್ ಬೇಗ್ ಸಲ್ಲಿಸಿದ್ದು, ವಿಚಾರಣೆಗೆ ಹಾಜರಾಗಲು 10 ದಿನಗಳ ಕಾಲಾವಕಾಶ ಕೋರಿದ್ದಾರೆ.
ಐಎಂಎ ಸಂಸ್ಥೆಯ ವಂಚನೆ ಬಳಿಕ ಹೊರಬಂದ ಆಡಿಯೋದಲ್ಲಿ ಮನ್ಸೂರ್ ಖಾನ್, ರೋಷನ್ ಬೇಗ್ ಹೆಸರು ಪ್ರಸ್ತಾಪ ಮಾಡಿದ್ದರು.