ರಾಜ್ಯಾದ್ಯಂತ ಕೋಟ್ಯಂತರ ರೂ. ವಂಚನೆ ಹಗರಣವಾಗಿರುವ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ವರದಿ ಮಾಡಿರುವ ಮಾಧ್ಯಮಗಳು ಕ್ಷಮೆ ಕೇಳಬೇಕು. ಹೀಗಂತ ಒತ್ತಾಯ ಕೇಳಿಬಂದಿದೆ.
ಐ ಎಮ್ ಎ ಸಂಸ್ಥೆ ವಂಚನೆಯ ಪ್ರಕರಣದಲ್ಲಿ ಕೆಲ ಮಾಧ್ಯಮಗಳು ವಿನಾಕಾರಣ ಮುಸ್ಲಿಂ ಹಿರಿಯ ಧರ್ಮಗುರು ಮೌಲಾನ ಮುಫ್ತಿ ಶುಯೇಬ್ ಉಲ್ಲಾಖಾನ್ ರವರನ್ನ ತೇಜೋವಧೆ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ.
ಚಾಮರಾಜನಗರದ ಬೀಡಿ ಕಾಲೂನಿಯಲ್ಲಿರುವ ಜಮಾಲ್ ಉಲ್ ಖುರಾನ್ ಅರಬ್ಬಿ ಮದರಸಾದಲ್ಲಿ ಮಾತನಾಡಿದ
ಚಾಮರಾಜನಗರ ಜಿಲ್ಲಾ ಮಜ್ಲಿಸೆ ಇಲ್ಮಿಯಾ ಸಮಿತಿಯ ಮೌಲಾನ ಅಬ್ದುಲ್ ಖಾದರ್ ಹಾಗೂ ಸೈಯದ್ ಇಮ್ತಿಯಾಜ್, ಶುಯೇಬ್ ಉಲ್ಲಾಖಾನ್ ರವರಿಗೂ ವಂಚನೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಐ ಎಮ್ ಎ ವಂಚನೆ ಮಾಡಿರುವುದು ಎಲ್ಲರಿಗೂ ಗೂತ್ತಿರುವ ವಿಚಾರ. ಆದರೆ ಈ ಬಗ್ಗೆ ರಾಜಕಿಯವಾಗಿ ಬಳಸಿ ಕೊಂಡು ಸುಳ್ಳು ಆಪಾದನೆ ಮಾಡುತ್ತಾ, ಐ ಎಂ ಎ ಮುಖ್ಯಸ್ಥ ಮನ್ಸೂರ್ ಖಾನ್ ಮತ್ತು ಮೌಲಾನ ಮುಫ್ತಿ ಶುಯೇಬ್ ಉಲ್ಲಾ ರವರ ಮಧ್ಯೆ ಇಲ್ಲ-ಸಲ್ಲದ ನಂಟು ಸೃಷ್ಟಿ ಮಾಡುವ ಹುನ್ನಾರ ಕೆಲ ಮಾಧ್ಯಮಗಳು ನಡೆಸುತ್ತಿವೆ ಎಂದರು.
ಮೌಲಾನ ಮುಫ್ತಿ ಶುಯೇಬ್, ಪತ್ರಕರ್ತ ರೂಂದಿಗೆ ಮಾತನಾಡಿ ಐ ಎಮ್ ಎ ಮತ್ತು ನನ್ನ ಮಧ್ಯೆ ಯಾವುದೇ ನಂಟು ಇಲ್ಲಾ ಎಂದು ಸ್ಪಷ್ಟ ಪಡಿಸಿದ್ದರೂ ಕೆಲ ಮೀಡಿಯಾಗಳ ವರ್ತನೆ ಬೇಸರ ತಂದಿದೆ ಎಂದರು. ಪ್ರಕರಣ ಕುರಿತು ಸಂಪೂರ್ಣ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೂಳ್ಳಬೇಕೆಂದು ಅವರು ಆಗ್ರಹಿಸಿದರು.
ಯಾವುದೇ ಆಧಾರ ವಿಲ್ಲದೆ ಸುಳ್ಳು ಆಪಾದನೆ ಮಾಡಿ ಮೌಲಾನರವರ ಗೌರವಕ್ಕೆ ಧಕ್ಕೆ ತಂದಿರುವ ಕೆಲ ಮಾಧ್ಯಮಗಳು ತಕ್ಷಣ ಕ್ಷಮೆ ಯಾಚಿಸಬೇಕೆಂದು ಖಾದರ್ ಮತ್ತು ಇಮ್ತ್ಯಾಜ್ ಇದೇ ವೇಳೆ ಒತ್ತಾಯಿಸಿದರು.