ಐಎಂಎ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕನ ಜಾಡು ಹಿಡಿದು ಹೊರಟಿರುವ ಎಸ್ ಐ ಟಿ ಆರೋಪಿ ಮನ್ಸೂರ್ ಬಂಧನಕ್ಕೆ ದುಬೈಗೆ ಹಾರಲಿದ್ದಾರೆ ಎನ್ನಲಾಗುತ್ತಿದೆ.
ಐಎಂಎ ವಂಚಕನ ಜಾಡು ಹಿಡಿದು ಹೊರಡಲಿರುವ ಎಸ್ ಐಟಿ ಕಿರಿಯ ಅಧಿಕಾರಿಗಳಿಗೆ ಪಾಸ್ ಪೋರ್ಟ್, ವೀಸಾ ರೆಡಿ ಮಾಡಿಕೊಳ್ಳುವಂತೆ ಹಿರಿಯ ಅಧಿಕಾರಿಗಳಿಂದ ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಯಾವ ಟೈಂ ನಲ್ಲಿ ಬೇಕಾದ್ರೂ ದುಬೈ ಗೆ ಹಾರಲಿದ್ದಾರೆ ಬೆಂಗಳೂರು ಪೊಲೀಸ್ರು.
ಈಗಾಗ್ಲೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ತಮ್ಮ ತಮ್ಮ ಪಾಸ್ ಪೋರ್ಟ್ ಗಳನ್ನು ಸಿದ್ಧ ಮಾಡಿಕೊಂಡಿದ್ದಾರೆ ಅಧಿಕಾರಿಗಳು. ಮನ್ಸೂರ್ ದುಬೈ ನಲ್ಲೇ ಇರುವ ಮಾಹಿತಿ ಕಲೆ ಹಾಕಿರುವ ಎಸ್ಐಟಿ ಅಧಿಕಾರಿಗಳು, ಬ್ಲ್ಯೂ ಕಾರ್ನರ್ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ದುಬೈ ನಿಂದ ಬೇರೆಡೆಗೆ ಮನ್ಸೂರ್ ತೆರಳುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಹೀಗಾಗಿ ಮನ್ಸೂರ್ ವಾಸ್ತವ್ಯದ ಖಚಿತತೆ ಮಾಡಿಕೊಂಡು ವಿಮಾನ ಏರಲಿದ್ದಾರೆ ಎಸ್ ಐಟಿ ತಂಡ ಎಂಬ ಸುದ್ದಿ ಹರಿದಾಡುತ್ತಿದೆ.
ಎಸ್ ಐ ಟಿ ಅಧಿಕಾರಿಗಳ ಜೊತೆಗೆ ಕೆಲವು ಸಿಸಿಬಿ ಅಧಿಕಾರಿಗಳು ಆಪರೇಷನ್ ಮನ್ಸೂರ್ ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.