Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮನ್ಸೂರ್ ಖಾನ್ ಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ-ಮಾಜಿ ಸಚಿವ ರೆಹಮಾನ್ ಖಾನ್ ಸ್ಪಷ್ಟನೆ

ಮನ್ಸೂರ್ ಖಾನ್ ಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ-ಮಾಜಿ ಸಚಿವ ರೆಹಮಾನ್ ಖಾನ್ ಸ್ಪಷ್ಟನೆ
ಬೆಂಗಳೂರು , ಸೋಮವಾರ, 24 ಜೂನ್ 2019 (12:40 IST)
ಬೆಂಗಳೂರು : ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ತಮ್ಮ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ಮನ್ಸೂರ್ ಖಾನ್ ಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.




ಈ ಕುರಿತು ನಡೆಸಿದ  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನನ್ನು ಮನ್ಸೂರ್ ಖಾನ್ ಗೆ ಪರಿಚಯಿಸಿದ್ದು ರೋಷನ್ ಬೇಗ್ ಅವರು. ನಾನು ಒಂದೇ ಬಾರಿ ಅವರನ್ನು ಭೇಟಿಯಾಗಿರುವುದು. ಅದೇ ಮೊದಲು, ಅದೇ ಕೊನೆ. ಅಲ್ಲದೇ ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ನನ್ನ ಒಬ್ಬನ ಹೆಸರನ್ನೇ ಹೇಳಿಲ್ಲ. ಅನೇಕ ರಾಜಕಾರಣಿಗಳ ಹೆಸರನ್ನು ಹೇಳಿದ್ದಾರೆ. ನಾನು ಮನ್ಸೂರ್ ಖಾನ್ ಜೊತೆಗೆ ಯಾವ ಗೆಳೆತನವನ್ನು ಬೆಳೆಸಿಲ್ಲ ಎಂದು ಹೇಳಿದ್ದಾರೆ.


ಐಎಂಎ ಕಂಪೆನಿ ಬಗ್ಗೆ ನಾನು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿದ್ದೆ. ಇದರಲ್ಲಿ ಹಣ ಹೂಡದಂತೆ ಜನರಿಗೆ ನಾನು ಮೊದಲೇ ಎಚ್ಚರಿಕೆ ನೀಡಿದ್ದೆ. ಆದರೆ ದುರಾಸೆಯಿಂದ ಜನರು ಹಣ ಹೂಡಿ ಮೋಸ ಹೋಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?