Publish Date: Sat, 17 Nov 2018 (18:27 IST)
Updated Date: Sat, 17 Nov 2018 (18:29 IST)
ಅರಣ್ಯ ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲಾಗಿದೆ.
ಬನ್ನೇರುಘಟ್ಟದ ಭೂತನಹಳ್ಳಿ ಬಳಿ ತೆರವು ಕಾರ್ಯಾಚರಣೆ ನಡೆದಿದೆ. ಬನ್ನೇರುಘಟ್ಟ ಕಗಲೀಪುರ ರಸ್ತೆಯಲ್ಲಿರುವ ಭೂತನಹಳ್ಳಿಯಲ್ಲಿ ಎಸಿಎಫ್ ರವೀಂದ್ರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
4.10 ಎಕರೆ ಜಮೀನನ್ನು ತೆರವುಗೊಳಿಸಿ ಅರಣ್ಯ ಅಧಿಕಾರಿಗಳ ವಶಕ್ಕೆ ಪಡೆದುಕೊಂಡರು.
ಜಮೀನಲ್ಲಿದ್ದ ಗಿಡಗಳನ್ನ ಜೆಸಿಬಿ ಮುಖಾಂತರ ತೆರವುಗೊಳಿಸಲಾಯಿತು.
ಜಯನಗರ ಬಿಜೆಪಿ ಕಾರ್ಪೊರೇಟರ್ ಸಿಕೆ ಗುರುಮೂರ್ತಿರವರಿಂದ ಒತ್ತುವರಿ ಆಗಿದೆ ಎಂದು ಆರೋಪ ಕೇಳಿಬಂದಿತ್ತು.
ಈ ಹಿನ್ನಲೆಯಲ್ಲಿ ಕೋರ್ಟ್ ಆದೇಶ ಮೇರೆಗೆ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ ನಡೆಯಿತು. ಬನ್ನೇರುಘಟ್ಟ ಪೊಲೀಸರು ,ಅರಣ್ಯ ಅಧಿಕಾರಿಗಳು ಕಾರ್ಯಾಚರಣೆಗೆ ಸಾಥ್ ನೀಡಿದ್ದರು.