Publish Date: Thu, 15 Nov 2018 (16:14 IST)
Updated Date: Thu, 15 Nov 2018 (16:17 IST)
ನಿಷೇಧಿತ ವಿಷಕಾರಿ ಆಹಾರ ಕ್ಯಾಟ್ ಫಿಶ್ ಸಾಕಾಣಿಕೆ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮುದ್ದುರಾಮನಾಯಕನ ಪಾಳ್ಯದಲ್ಲಿ ಲಕ್ಕೂರಿನ ಖಲೀಲ್ ಎಂಬುವರಿಗೆ ಸೇರಿದ ಸಾಕಾಣಿಕೆ ಅಡ್ಡೆ ಮೇಲೆ ದಾಳಿ ನಡೆಸಲಾಗಿದೆ.
ನೆಲಮಂಗಲ ತಹಶಿಲ್ದಾರ್ ಎನ್.ರಾಜಶೇಖರ್ ಹಾಗೂ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇನ್ನೂ ಅಗಳಕುಪ್ಪೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಲಕ್ಷ್ಮೀ ತಾಯಿಗೆ ಸೇರಿದ ಜಮೀನಿನಲ್ಲಿ ಬಾಡಿಗೆ ಪಡೆದು ಖಲೀಲ್ ಕ್ಯಾಟ್ ಫಿಶ್ ಸಾಕುತ್ತಿದ್ದಾರೆ. ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾಳಿಯನ್ನು ಅಧಿಕಾರಿಗಳು ನಡೆಸಿದ್ದಾರೆ.