ಜಲಾನಯನ ಅಭಿವೃದ್ಧಿ ಇಲಾಖೆ ಸುಜಲಾ ಯೋಜನೆಯಡಿ ರೈತರಿಗೆ ಭೂ ಸಂಪನ್ಮೂಲ ಮಾಹಿತಿ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಚಾಮರಾಜನಗರದ ಶಿವಕುಮಾರಸ್ವಾಮಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಭೂಮಿಯ ಸುಭದ್ರತೆಗೆ ಬೇಕಾಗಿರುವ ನಿಯಮಗಳ ಪಾಲನೆಗೆ, ರೈತ ವೈಜ್ಞಾನಿಕವಾಗಿ ಪಾಲಿಸಬೇಕಾಗಿರುವುದು ಅತ್ಯಗತ್ಯ ಎಂದರು.
ಇದು ಮೂರನೇ ಹಂತದ ಕಾರ್ಯಾಗಾರವಾಗಿದ್ದು, ರೈತರಿಗೆ ಭೂ ಸಂಪತ್ತಿನ ಬಗ್ಗೆ ಅರಿವು ಹಾಗೂ ಅನುಕೂಲವಾಗುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕಾಲೇಜಿನ ಮೂಲಕ ವೈಜ್ಞಾನಿಕ ಸಂಶೋಧನೆಗೆ, ಅದರ ಬಗ್ಗೆ ವಿಚಾರ ವಿನಿಮಯಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.