Publish Date: Fri, 27 Oct 2023 (17:20 IST)
Updated Date: Fri, 27 Oct 2023 (17:23 IST)
ಹುಲಿ ಪೆಂಡೆಂಟ್ ಧರಿಸಿದ ಪ್ರಕರಣ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಬೆಳಗಾವಿ ಕುವೆಂಪು ನಗರದಲ್ಲಿರುವ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಸಚಿವೆ ಹೆಬ್ಬಾಳ್ಕರ್ ಮನೆಗೆ DFO ಶಂಕರ ಕಲ್ಲೋಳಿಕರ್, ACF ಸುರೇಶ ತೇಲಿ ನೇತೃತ್ವದಲ್ಲಿ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಚಿವೆ ಪುತ್ರ ಮೃನಾಲ್ ಹೆಬ್ಬಾಳ್ಕರ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಫೋಟೋ ವೈರಲ್ ಆಗಿದೆ.ಈ ಬಗ್ಗೆ ಅರಣ್ಯಾಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ಕೊಡ್ತೀನಿ ಎಂದಿದ್ದಾರೆ.
geetha
Publish Date: Fri, 27 Oct 2023 (17:20 IST)
Updated Date: Fri, 27 Oct 2023 (17:23 IST)