Publish Date: Fri, 20 Oct 2023 (18:00 IST)
Updated Date: Fri, 20 Oct 2023 (19:38 IST)
ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಯಾವುದೇ ಕಿರಿಕಿರಿಯಿಲ್ಲ. ಅವರನ್ನು ಮೀರಿ ಬೆಳೆದಿದ್ದೇವೆ. ಎಲ್ಲರನ್ನು ಸಂಬಾಳಿಸಿಕೊಂಡು ಹೋಗಬೇಕು. ನಾನು ಆರು ಬಾರಿ ಶಾಸಕನಾಗಿದ್ದೇನೆ, ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಕೆಲವರು ಒಂದು ಶಾಸಕರಾಗಿ ಸಚಿವರಾಗಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ನನ್ನ ಸೈಲೆಂಟ್ ನನ್ನ ದೌರ್ಬಲ್ಯ ಅಲ್ಲ, ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರಗೆ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.