ಅಧಿಕಾರಿಳ ದುರ್ಬಳಕೆ ವಿಚಾರವಾಗಿ ತಾಜ್ ವೆಸ್ಟೆಂಡ್ ಹೋಟೆಲ್ ಬಳಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ನಾನು ಎಚ್ ಡಿ ಕೆ ಗೆ ಉತ್ತರ ಕೊಡಲು ತಯಾರಿಲ್ಲ.ರಾಜ್ಯದ ಕಾಂಗ್ರೆಸ್ ಸರಕಾರ ಇದೆ. ಸರ್ಕಾರ ಇರ್ತದೆ ಹೊಗ್ತದೆ.ಪ್ರೋಟೋಕಾಲ್ ಅಲ್ಲಿ ಸ್ಟೆಟ್ ಗೆಸ್ಟ್ ಅಂತ ನೇಮಕ ಮಾಡಿದಾಗ.ಅಲ್ಲಿ ಯಾರು ಇರಬೇಕೋ ಇರ್ತಾರೆ.ಸ್ವೀಕರಿಸೋದಕ್ಕೆ ಕಳಿಸೋದಕ್ಕೆ ನಾನು ಸೇರಿ ಹಲವು ಮಂತ್ರಿಗಳನ್ನ ಹೋಗಿ ಕೆಲವು ಸಿಎಂ ಗಳನ್ನ ರಿಸೀವ್ ಮಾಡಿದ್ದಿನಿ.ಬೇರೆ ಮಂತ್ರಿಗಳು ,ಹಾಗೇ ಅಧಿಕಾರಿಗಳನ್ನ ಹಿರಿಯ ನಾಯಕರಿಗೆ ಪ್ರೋಟೋಕಾಲ್ ಪ್ರಕಾರ ನೇಮಿಸಲಾಗಿದೆ.ಇದು ಹಿಂದೆಯಿಂದಲೂ ನಡೆದುಕೊಂಡ ಬಂದ ಪದ್ದತಿ.ಕುಮಾರಣ್ಣ ಮಾತಾಡ್ತಾರೆ.ಅವರಿಗೂ ನ್ಯೂಸ್ ಬೇಕಲ್ವಾ?ವಿರೋಧ ಪಕ್ಷದ ಸಭೆ ನಡೆತಿದೆ. ಆಹ್ವಾನ ಕೊಟ್ಟಿಲ್ಲ.ಎನ್ ಡಿ ಎ ಆಹ್ವಾನಕ್ಕೆ ಕಾಯ್ತಿದ್ದಿವಿ ಎಂದಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ರು
ಚಾಂಡಿ ಅವರ ಸಾವು ಆಗಿದೆ, ನಮ್ಮ ನಾಯಕರು ಹೋಗಿ ಬರುತ್ತಾರೆ.ಸಭೆ 15 ನಿಮಿಷಗಳ ಕಾಲ ತಡ ಆಗಬಹುದು.ಆದರೆ ಎಂದಿನಂತೆ ಸಭೆ ನಡೆಯಲಿದೆ.ಸೋನಿಯಾ, ರಾಹುಲ್ ಗಾಂಧಿ ಹೋಗಿ ಅಂತಿಮ ದರ್ಶನ ಪಡೆಯುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ರು.
ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಪೋಸ್ಟರ್ ಅಂಟಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಬಿಜೆಪಿ ಸ್ನೇಹಿತರು ಪೋಸ್ಟರ್ ಅಂಟಿಸಿದ್ದಾರೆ.ಅವರ ರಾಜಕೀಯ ಅವರು ಮಾಡುತ್ತಿದ್ದಾರೆ ಪೋಸ್ಟರ್ ಅಂಟಿಸಿದರವು ಹೇಡಿಗಳು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.