Publish Date: Sat, 08 Jul 2023 (16:30 IST)
Updated Date: Sat, 08 Jul 2023 (16:17 IST)
ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ರಾನ್ಸ್‌ಫರ್ ದಂಧೆ ಆರೋಪ ಮಾಡಿರುವುದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿರುಗೇಟು ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಆರೋಪ ಮಾಡುವ ಮುನ್ನ ದಾಖಲೆಗಳನ್ನ ಬಿಡುಗಡೆ ಮಾಡಿ ಮಾತನಾಡಲಿ. ಅದೆನೋ ಪೆನ್‌ಡ್ರೈವ್ ಬಗ್ಗೆ ಇದೆ ಅಂತಾ ಹೇಳ್ತಿದಾರೆ. ಅದನ್ನು ಓಪನ್ ಮಾಡಲಿ ಎಂದು ಸವಾಲು ಹಾಕಿದ್ರು. ಹೊಸ ಸರ್ಕಾರ ಬಂದಾಗ ಟ್ರಾನ್ಸ್‌ಫರ್ ಮಾಡೋದು ಸರ್ವೇ ಸಾಮಾನ್ಯ ಎಂದರು. ಹಾಗಾದ್ರೆ ಬಿಜೆಪಿ ಸರ್ಕಾರದಲ್ಲಿ ಟ್ರಾನ್ಸ್‌ಫರ್ ಆಗಿಲ್ಲವೇ.? ಎಂದು ಪ್ರಶ್ನಿಸಿದರು. ಊಹಾಪೋಹಗಳಿಗೆ ಉತ್ತರ ಕೊಡುವುದು ಸಮಂಜಸವಲ್ಲ ಎಂದು ತಿರುಗೇಟು ನೀಡಿದರು.