Select Your Language

Notifications

webdunia
webdunia
webdunia
webdunia

ರಾತ್ರೋರಾತ್ರಿ 7 ಬೈಕ್ ಸುಟ್ಟಿದ್ದು ಹೇಗೆ?

ಬೈಕ್
ತಡರಾತ್ರಿ ಸಂಭವಿಸಿದ ಬೆಂಕಿ ಅವಘಡಕ್ಕೆ ಬೈಕ್ ಮಾಲೀಕರು ನಲುಗಿದ್ದರೆ, ಸೈಕಲ್ ಸವಾರರು ಆತಂಕಗೊಂಡಿದ್ದಾರೆ.

ಅಗ್ನಿ ಅವಘಡ ಸಂಭವಿಸಿ ದ್ವಿಚಕ್ರ ವಾಹನಗಳು ಸುಟ್ಟು ಕರಕಲಾದ ಘಟನೆ ತಡರಾತ್ರಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹರಿದೇವನಗಲ್ಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಒಟ್ಟು 7 ಬೈಕ್, 3 ಸೈಕಲ್ ಬೆಂಕಿಗೆ ಆಹುತಿಯಾಗಿವೆ.

ಬೆಂಕಿಗಾಹುತಿಯಾದ ಬೈಕ್ ಗಳು ರಸ್ತೆ ಪಕ್ಕದ ಲೈಟ್ ಕಂಬದ ಬಳಿ ನಿಲ್ಲಿಸಿಡಲಾಗಿತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ ವ್ಯಾಕ್ತವಾಗಿದ್ರೆ, ಇನ್ನು ಕೆಲವರು ಇದು ‌ಕಿಡಿಗೇಡಿಗಳ ಕುಕೃತ್ಯ ಎನ್ನುತ್ತಿದ್ದಾರೆ.

ಈ ಬಗ್ಗೆ ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಎನಿ ಟೈಮ್, ಎನಿ ವೇರ್ ರೆಡಿ ಅಂತೆ!