Publish Date: Wed, 10 Apr 2019 (17:02 IST)
Updated Date: Wed, 10 Apr 2019 (17:03 IST)
ಮಂಡ್ಯ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ ಕೇವಲ ಆರೋಪ ಮಾಡುತ್ತಾರೆ ಎಂಬ ನಿಖಿಲ್ ಹೇಳಿಕೆಗೆ ಸುಮಲತಾ ಅಂಬರೀಶ್ ಗರಂ ಆಗಿದ್ದಾರೆ. ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ.
ಎನಿ ಟೈಮ್, ಎನಿ ವೇರ್ ಅವರೊಂದಿಗೆ ಚರ್ಚೆಗೆ ಸಿದ್ಧ. ಮಂಡ್ಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾನು ಸಿದ್ಧಳಿದ್ದೇನೆ. ಜೆಡಿಎಸ್ ನಾಯಕರು ಟೀಕೆಗಳು ಮಾಡುವಾಗ ಮಂಡ್ಯ ಅಭಿವೃದ್ಧಿ ನೆನಪಾಗಲಿಲ್ವ..? ಈಗ ಅವರು ಮಂಡ್ಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಎಂದಿದ್ದಾರೆ.
ಜೆಡಿಎಸ್ ನಾಯಕರ ಹೇಳಿಕೆಗಳನ್ನ ಜನ ಕೇಳಿದ್ದಾರೆ. ಅವರಿಗೆ ಕೋಪ ಇದೆ. ಈಗ ಅವರು ಅಭಿವೃದ್ಧಿ ಬಗ್ಗೆ ಮಾತನಾಡಿದ್ರೆ ಜನ ನಂಬಲ್ಲ ಎಂದರು.