Publish Date: Tue, 02 Apr 2019 (19:58 IST)
Updated Date: Tue, 02 Apr 2019 (20:00 IST)
ಖತರ್ನಾಕ್ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಥಣಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳ್ಳತನ ಮಾಡಿ ಮಾರಾಟ ಮಾಡಿದ್ದ ಇಪ್ಪತ್ತೊಂದು ಬೈಕ್ ಹಾಗೂ ಒಂದು ಟ್ರ್ಯಾಕ್ಟರ್ ವಶ ಪಡಿಸಿಕೊಂಡಿದ್ದಾರೆ. ಎಂಟು ಲಕ್ಷ ಐವತ್ತು ಸಾವಿರ ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೂವರ ಬಂಧನ ಮಾಡಲಾಗಿದೆ.
ಸಪ್ತಸಾಗರ ಗ್ರಾಮದ ನಿವಾಸಿಗಳಾದ ರಾಜಕುಮಾರ ತಾತು ಚುನಾರ, ರವಿಚಂದ್ರ ಅಣ್ಣಪ್ಪ ಚುನಾರ, ನದಿ ಇಂಗಳಗಾಂವ ಗ್ರಾಮದ ರಾಜು ಪರಗೌಡ ಮುದಿಗೌಡರ ಬಂಧಿತ ಆರೋಪಿಗಳಾಗಿದ್ದಾರೆ.
ತಲೆ ಮರೆಸಿಕೊಂಡ ಇನ್ನುಳಿದ ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.