Publish Date: Sat, 10 Oct 2020 (18:07 IST)
Updated Date: Sat, 10 Oct 2020 (18:10 IST)
ಬೇರೊಬ್ಬನ ಪತ್ನಿಯು ಈತನಿಗೆ ನೀಡುತ್ತಿದ್ದ ಸುಖದಿಂದ ಮೈಮರೆತ ವ್ಯಕ್ತಿ ಮಾಡಬಾರದ್ದನ್ನು ಮಾಡಿದ್ದಾನೆ.
ಬೇರೆಯವನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಜೊತೆಗೂಡಿ ಆಕೆಯ ಗಂಡನನ್ನೇ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಚಂದ್ರಪ್ಪ ಲಂಬಾಣಿಯ ಪತ್ನಿ ಶೋಭಾ ಜೊತೆಗೆ ದಿಳ್ಳೆಪ್ಪ ಅಂತರವಳ್ಳಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದನು.
ತಮ್ಮ ಸಂಬಂಧಕ್ಕೆ, ಸುಖಕ್ಕೆ ಗಂಡ ಅಡ್ಡಿಯಾಗುತ್ತಾನೆ ಎಂದು ಭಾವಿಸಿ ಇಬ್ಬರೂ ಸೇರಿ ಚಂದ್ರಪ್ಪನನ್ನು ಕೊಲೆ ಮಾಡಿ ಶವವನ್ನು ರೈಲು ಹಳಿ ಮೇಲೆ ಎಸೆದು ಹೋಗಿದ್ದರು ಎನ್ನಲಾಗಿದೆ.
ಹುಬ್ಬಳ್ಳಿಯಲ್ಲಿ ಘಟನೆ ನಡೆದಿದ್ದು, ಪೊಲೀಸ್ ತನಿಖೆ ವೇಳೆ ಶೋಭಾ ಹಾಗೂ ದಿಳ್ಳೆಪ್ಪನ ಅಕ್ರಮ ಸಂಬಂಧ ಮತ್ತು ಕೊಲೆ ಮಾಡಿರುವ ವಿಷಯ ಬಯಲಿಗೆ ಬಂದಿದೆ.