Publish Date: Sun, 27 Oct 2019 (14:43 IST)
Updated Date: Sun, 27 Oct 2019 (14:46 IST)
ತೂಫಾನಿನಲ್ಲಿ ಸಿಲುಕಿದ್ದವರು ಬದುಕಿ ಬಂದಿದ್ದಾರೆ.
ತೂಫಾನಿನಲ್ಲಿ ಸಿಲುಕಿದ್ದ 18 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಕಾರವಾರ ಮತ್ತು ಗೋವಾದ ಗಡಿಯಲ್ಲಿ ಘಟನೆ ನಡೆದಿದೆ.
ತೂಫಾನಿಗೆ ಸಿಲುಕಿದ್ದ ಮಂಗಳೂರಿನ ಮಹೇಲಿ, ಮಲ್ಪೆಯ ರಾಜ್ ಕಿರಣ್ ಬೋಟ್ ನಲ್ಲಿದ್ದ 18 ಮೀನುಗಾರರ ರಕ್ಷಣೆ ಮಾಡಲಾಗಿದೆ.
ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಕಾರವಾರ ಜಿಲ್ಲಾಧಿಕಾರಿಗೆ ತುರ್ತು ಸೂಚನೆ ನೀಡಿದ್ದರು ಸಚಿವ ಕೋಟಾ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಸಂಪರ್ಕ ಮಾಡಲಾಗಿತ್ತು. ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಿ ಮನವಿ ಮಾಡಲಾಗಿತ್ತು. ಮಂಗಳೂರು ಮಲ್ಪೆಗೆ 18 ಮೀನುಗಾರರನ್ನು ರಕ್ಷಿಸಿ ತರಲಾಗಿದೆ.