ಬಡ ರೈತನಿಂದ ಲಂಚ ಪಡೆಯುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಬಂಧನ ಮಾಡಲಾಗಿದೆ.
ಕೆ.ಆರ್.ಪೇಟೆಯಲ್ಲಿ ಜಮೀನು ಸ್ವಾಧೀನಕ್ಕೆ ಪೊಲೀಸ್ ರಕ್ಷಣೆ ನೀಡುವಂತೆ ರೈತರೊಬ್ಬರು ಮನವಿ ಮಾಡಿದ್ದಾರೆ. ಎರಡ್ಮೂರು ತಿಂಗಳು ಮನವಿ ಮಾಡಿದರೂ ಎಎಸ್ಐ ಮಾತ್ರ ರಕ್ಷಣೆ ಕೊಡಲಿಲ್ಲ.
ಕೊನೆಗೆ 30 ಸಾವಿರ ಲಂಚ ಕೊಟ್ಟರೆ ಮಾತ್ರ ರಕ್ಷಣೆ ಕೊಡೋದಾಗಿ ಹೇಳಿದ್ದಾರೆ ಎಎಸ್ ಐ ಈರೇಗೌಡ.
ಬಡ ರೈತ ಸಾಲ ಮಾಡಿ ಹಣ ಹೊಂದಿಸಿದ್ದಾರೆ. 22 ಸಾವಿರ ಹಣ ಲಂಚವಾಗಿ ರೈತ ಕೊಡುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಎಎಸ್ ಐ ಈರೇಗೌಡ ರನ್ನು ಬಂಧನ ಮಾಡಿದ್ದಾರೆ.
ರೈತನ ಜಮೀನಿಗೆ ರಕ್ಷಣೆ ನೀಡುವಂತೆ ತಹಸೀಲ್ದಾರ್ ಗ್ರಾಮಾಂತರ ಪೊಲೀಸರಿಗೆ ಪತ್ರ ಬರೆದಿದ್ದರು. ಆದರೂ ಎಎಸ್ ಐ ರೈತನಿಂದ ಲಂಚದ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.