ನವದೆಹಲಿ: ದೇಶವಿಡೀ ದೀಪಾವಳಿ ಹಬ್ಬದ ಸಂಭ್ರಮದಲ್ಲಿದೆ. ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಕೋವಿಂದ್ ದೇಶದ ಜನತೆಗೆ ದೀಪಾವಳಿ ಹಬ್ಬಕ್ಕೆ ಶುಭ ಕೋರಿದ್ದಾರೆ.
ಈ ದೀಪಾವಳಿ ಹಬ್ಬ ದೇಶದ ಜನತೆಗೆ ಒಳ್ಳೆಯ ಆರೋಗ್ಯ, ಸುಖ, ನೆಮ್ಮದಿ ನೀಡಲಿ ಎಂದು ಪ್ರಧಾನಿ ತಮ್ಮ ಟ್ವಿಟರ್ ಪೇಜ್ ಮುಖಾಂತರ ಶುಭಾಷಯ ಸಂದೇಶ ನೀಡಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಕೂಡಾ ಶುಭಾಷಯ ತಿಳಿಸಿದ್ದು, ಈ ದೀಪಾವಳಿ ಮೂಲಕ ಅಶಕ್ತರ ಬಾಳಿನಲ್ಲಿ ಬೆಳಕಾಗಲು ನೆರವಾಗೋಣ ಎಂದು ಕೋರಿದ್ದಾರೆ.