ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಸರ್ಕಾರ ಮತ್ತೊಂದು ದೊಡ್ಡ ಶಾಕ್ ಕೊಟ್ಟಿದೆ,ಎಂಟು ತಿಂಗಳ ನಂತರ ಮತ್ತೆ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಣ್ಣೀರಿಡುವಂತಾಗಿದೆ.
ಇಂದಿನಿಂದ ಜಾರಿಗೆ ಬರುವಂತೆ 14.2 ಕೆಜಿ ಗೃಹಬಳಕೆಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ LPG ಸಿಲಿಂಡರ್ನ ಬೆಲೆ ₹ 50 ಏರಿಕೆಯಾಗಿದೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ, ದೆಹಲಿಯಲ್ಲಿ ಗೃಹಬಳಕೆಯ ಸಿಲಿಂಡರ್ ಪ್ರತಿ ಸಿಲಿಂಡರ್ಗೆ ₹1103 ವೆಚ್ಚವಾಗಿದೆ , ಈ ಬೆಲೆ ದೇಶದಾದ್ಯಂತ ನಿನ್ನೆ ಇಂದಲೇ ಚಾಲ್ತಿಯಲ್ಲಿದ್ದು ,ಸಿಲೆಂಡರ್ ನ ಬೆಲೆ ಹೆಚ್ಚಳ ವಾದರಿಂದ ಜನಸಾಮಾನ್ಯರು ಶಾಕ್ ಆಗಿದ್ದಾರೆ. ಸಿಲೆಂಡರ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದ್ರೆ ಜೀವನ ನಡೆಸೋದೆ ಕಸ್ಟವಾಗಿದೆ.. ಅಂತ ಜನಸಾಮಾನ್ಯರು ಸರ್ಕಾರದ ವಿರುದ್ದ ಕಿಡಿಕಾಡ್ತಿದ್ದಾರೆ.
ಗೃಹ ಬಳಕೆ ಗ್ಯಾಸ್ ಸಿಲೆಂಡರ್ ಮಾತ್ರವಲ್ಲ , 19 ಕೆಜಿಯ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ ಸಹ ₹350.50 ಏರಿಕೆಯಾಗಿದೆ. ಈ ಹೆಚ್ಚಳದೊಂದಿಗೆ 19 ಕೆಜಿ ವಾಣಿಜ್ಯ ಸಿಲಿಂಡರ್ನ ಬೆಲೆ ದೆಹಲಿಯಲ್ಲಿ ₹2119.50 ಆಗಲಿದೆ. ಬೆಂಗಳೂರಿನಲ್ಲೂ ಸಹ ಈ ದರ ನಿನ್ನೆ ಇಂದಲೇ ಚಾಲ್ತಿಯಾಗಿದ್ದು , ಹೋಟೆಲ್ ನ ಮಾಲೀಕರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಮಾರುಕಟ್ಟೆಯ ಸನ್ನಿವೇಶದಲ್ಲಿ ಏರುತ್ತಿರುವ ಇಂಧನ ಬೆಲೆಗಳ ಭಾರ ಭರಿಸಬೇಕಾಗಿರುವುದರಿಂದ ಎಲ್ಪಿಜಿ ಬೆಲೆಗಳ ಹೆಚ್ಚಳವು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತಿದೆ.ಭಾರತದಲ್ಲಿ LPG ಬೆಲೆಯನ್ನು ರಾಜ್ಯ-ಚಾಲಿತ ತೈಲ ಕಂಪನಿಗಳು ನಿರ್ಧರಿಸುತ್ತವೆ .ಮತ್ತು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ಭಾರತದಲ್ಲಿ ಬಹುತೇಕ ಎಲ್ಲಾ ಮನೆಗಳು LPG ಸಂಪರ್ಕವನ್ನು ಹೊಂದಿದ್ದು, ಎಲ್ಪಿಜಿ ಬೆಲೆಗಳ ಹೆಚ್ಚಳ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಜನಸಮ್ಯಾನರು ತತ್ತರಿಸಿಹೋಗಿದ್ದಾರೆ.