Publish Date: Thu, 02 Mar 2023 (14:24 IST)
Updated Date: Thu, 02 Mar 2023 (16:25 IST)
ಬೆಂಗಳೂರು : ಕಾಂಗ್ರೆಸ್ ಪಕ್ಷ ದೇಶದಲ್ಲಿ ತಲೆ ತಗ್ಗಿಸುವ ಹೇಳಿಕೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ ಎಂದು ಸಚಿವ ಅಶೋಕ್ ಕಿಡಿಕಾರಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಜನರಿಗೆ 500 ರೂ. ಕೊಟ್ಟು ಕರೆದುಕೊಂಡು ಬನ್ನಿ ಎಂಬ ವೀಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ತಲೆ ತಗ್ಗಿಸುವ ಹೇಳಿಕೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ.
50 ವರ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಹೇಗೆ ಸರ್ಕಾರ ನಡೆಸಿದೆ ಎಂಬುದು ಬಟಾಬಯಲಾಗಿದೆ. ಯಾರು ಯಾವ ರೀತಿ ಇಷ್ಟು ದಿನ ಗೆದ್ದರು ಮತ್ತು ಆಡಳಿತ ನಡೆಸಿದರು ಎಂಬುದು ಗೊತ್ತಾಗಿದೆ. ಇದು ರಾಜ್ಯದ ಜನರಿಗೆ ಮಾಡಿರುವ ಅವಮಾನ ಎಂದರು.