ಬೆಂಗಳೂರಲ್ಲಿ ಹೋಟೆಲ್ 24/7 ಓಪನ್ ವಿಚಾರ ಈಗ ಹೋಟೆಲ್ ಮಾಲೀಕರ ಸಂಘ ಹಾಗೂ ಪೊಲೀಸರ ನಡುವೆ ಹಗ್ಗಜಗ್ಗಾಟ ಮುಂದುವರೆಯುತ್ತಲೇ ಇದೆ. ಕರ್ನಾಟಕ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆ 1961 ರ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಹೋಟೆಲ್ ಗಳಿಗೆ ಅನುಮತಿ ಅನ್ವಯಿಸುವಂತೆ. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಕಾರ್ಮಿಕ ಇಲಾಖೆ ಅನುಮತಿ ನೀಡಿದೆ. ಆದ್ರೆ 15 ನಿಬಂಧನೆಗಳಲ್ಲಿ ಪೊಲೀಸರ ಅನುಮತಿ ಕಡ್ಡಾಯ ಅಂತ ಕಾರ್ಮಿಕ ಇಲಾಖೆ ತಿಳಿಸಿದೆ. 24/7 ಕಾರ್ಯಚಟುವಟಿಕೆಗೆ ಬೆಂಗಳೂರು ಪೊಲೀಸರ ಒಪ್ಪಿಗೆ ನೀಡೋಕೆ ಮುಂದೆ ಬರ್ರ್ತಿಲ್ಲ. ಹೋಟೆಲ್ ಗಳಿಗೆ ರಾತ್ರಿ ಪೂರ್ತಿ ಭದ್ರತೆ ಒದಗಿಸಲು ಸಾಧ್ಯವಿಲ್ಲ ಅನ್ನೋ ನೆಪವನ್ನ ಪೊಲೀಸರು ನೀಡ್ತಿದ್ದಾರಂತೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ಹೋಟೆಲ್ ಮಾಲೀಕರ ಸಂಘದಿಂದ ಮತ್ತೆ ಮನವಿ ಸಲ್ಲಿಸಿದ್ದಾರೆ.