Publish Date: Sun, 07 May 2023 (17:30 IST)
Updated Date: Sun, 07 May 2023 (17:41 IST)
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾರಾಯಣ ರಾಜು ಕ್ಷೇತ್ರದ ಸುತ್ತಮುತ್ತಲ ಗಾರ್ಮೆಂಟ್ಸ್‌ಗಳಿಗೆ ಭೇಟಿ ನೀಡಿ ಮತಯಾಚಿಸಿದ್ರು.. ಇನ್ನು ನಾರಾಯಣ ರಾಜು ಜೊತೆ ಜೆಡಿಎಸ್ ಯುವ ಮುಖಂಡ ರಾಜೇಂದ್ರ, ಆರ್.ಎಂ.ರಮೇಶ್ ಸೇರಿದಂತೆ ಹಲವರು ಸಾಥ್ ಕೊಟ್ರು.. ಈ ಬಾರಿ ಬದಲಾವಣೆಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಗಾರ್ಮೆಂಟ್ಸ್ ಕಾರ್ಮಿಕರಿಗೆ ಮನವಿ ಮಾಡಿದ್ರು.. ಇನ್ನು ಗಾರ್ಮೆಂಟ್ಸ್ ಕಾರ್ಮಿಕರ ಜೊತೆ ಮಾತನಾಡಿದ ಅಭ್ಯರ್ಥಿ ನಾರಾಯಣ ರಾಜು, ಜೆಡಿಎಸ್‌ಗೆ ಮತ ನೀಡಿ ಯಾವುದೇ ಸಮಸ್ಯೆ ಇದ್ದರೂ ಸಹ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದ್ರು.