ಬೆಂಗಳೂರು : ರಾಜ್ಯದ 12 ಜಿಲ್ಲೆಗಳಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ಈಗಾಗಲೇ ಮಳೆಯಿಂದಾದ ನಷ್ಟದ ಬಗ್ಗೆ ರಾಜ್ಯ ಸರ್ಕಾರ ವರದಿ ಸಿದ್ಧಪಡಿಸಿದೆ ಎನ್ನಲಾಗಿದೆ.
ಕೊಡಗಲ್ಲೇ 2000 ಕೋಟಿಗೂ ಹೆಚ್ಚು ನಷ್ಟ ಎಂದು ಅಂದಾಜಿಸಲಾಗಿದೆ. ಹಾಗೇ ಚಿಕ್ಕಮಗಳೂರಲ್ಲಿ 1000 ಕೋಟಿಗೂ ಹೆಚ್ಚ ನಷ್ಟವಾಗಿದೆ ಎನ್ನಲಾಗಿದೆ . ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ , ಉಡುಪಿ ಜಿಲ್ಲೆಯ ಹಾನಿಯ ಮಾಹಿತಿ ಸಂಗ್ರಹಿಸಲಾಗಿದೆ. ಎನ್.ಡಿ.ಆರ್.ಎಫ್ ನಿಧಿಯಡಿ ತಕ್ಷಣ ಪರಿಹಾರಕ್ಕೆ ಮನವಿ ಮಾಡಲಿದ್ದು, ಮೊದಲ ಕಂತಿನಲ್ಲೇ ಹಣ ಬಿಡುಗಡೆಗೆ ಒತ್ತಾಯ ಮಾಡಲಿದೆ ಎನ್ನಲಾಗಿದೆ.