Publish Date: Wed, 20 Sep 2023 (19:25 IST)
Updated Date: Wed, 20 Sep 2023 (19:30 IST)
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ.. ಮೈತ್ರಿ ಪಕ್ಕಾ ಎಂದು ಹೇಳಲಾಗ್ತಿದ್ದು, ಸೀಟು ಹಂಚಿಕೆ ಇನ್ನೂ ಚರ್ಚೆಯಾಗಿಲ್ಲ.. ಇದೀಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ H.D.ಕುಮಾರಸ್ವಾಮಿ ನಾಳೆ ದೆಹಲಿಗೆ ತೆರಳುತ್ತಿದ್ದು, ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ. ಸೀಟು ಹಂಚಿಕೆ ಲೆಕ್ಕಾಚಾರದ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ.. 5ರಿಂದ 6 ಲೋಕಸಭೆ ಸ್ಥಾನ ಸಿಗುವ ನೀರಿಕ್ಷೆಯಲ್ಲಿ JDS ಪಕ್ಷ ಇದೆ.. 3 ಸ್ಥಾನ ಬಿಟ್ಟುಕೊಟ್ಟರೆ ಸಾಕು ಎಂದು ಬಿಜೆಪಿ ಕೇಳ್ತಿದೆ ಎನ್ನಲಾಗಿದೆ.. ಹೀಗಾಗಿ ಅಂತಿಮ ಲೆಕ್ಕಾಚಾರ ಹಾಕಲು ನಾಳೆ ಸಭೆ ನಡೆಸಲಿದ್ದಾರೆ.. ಮೈತ್ರಿ ಸಮನ್ವಯದ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಮೈತ್ರಿ ಧರ್ಮ ಪಾಲಿಸಲು ಸಮನ್ವಯ ಸಮತಿ ರಚನೆ ಮಾಡಲಾಗುತ್ತದೆ.. ಈ ಮೂಲಕ ಕಮಲ-ದಳದ ನಡುವೆ ಹೊಂದಾಣಿಕೆ ಕೊರತೆ ಬರದಂತೆ ನೋಡಿಕೊಳ್ಳಲಾಗುತ್ತದೆ.
geetha
Publish Date: Wed, 20 Sep 2023 (19:25 IST)
Updated Date: Wed, 20 Sep 2023 (19:30 IST)