ಸಮುದಾಯವಾರು ಡಿಸಿಎಂ ನೇಮಕ ವಿಚಾರ ಚರ್ಚೆಗೆ ಬಂದಿದ್ದು, ಈ ವಿಚಾರದಲ್ಲಿ ಹಲವು ಸಚಿವರು ಅಂತರ ಕಾಯ್ದುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ಸಮುದಾಯವಾರು ಡಿಸಿಎಂ ನೇಮಕ ಆಗಬೇಕು ಎಂದು ಸಚಿವ ರಾಜಣ್ಣ ಆಗ್ರಹಿಸಿದ್ರು.. ಸಚಿವ ರಾಜಣ್ಣ ಆಗ್ರಹಕ್ಕೆ ಹಲವು ಸಚಿವರು ಸೊಪ್ಪು ಹಾಕದೇ ಅಂತರ ಕಾಯ್ದುಕೊಂಡಿದ್ದಾರೆ. ಸಚಿವರಾದ ಶಿವನಾಂದ ಪಾಟೀಲ್, ಶಿವರಾಜ್ ತಂಗಡಗಿ, ನಾಗೇಂದ್ರ, ಶರಣಪ್ರಕಾಶ್ ಪಾಟೀಲ್, ರಹೀಂ ಖಾನ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಸಚಿವರು ಈ ವಿಚಾರದ ಚರ್ಚೆಯಲ್ಲಿ ಅಂತರ ಕಾಯ್ದುಕೊಂಡಿದ್ದಾರೆ.. ಸದ್ಯ ಸಚಿವರಾಗಿದ್ದೇವೆ.. ಡಿಸಿಎಂ ವಿಚಾರದ ಚರ್ಚೆ ಬೇಡ ಎಂದು ದೂರ ಉಳಿದಿದ್ದಾರೆ. ಹಿರಿಯ ನಾಯಕರು ಡಿಸಿಎಂ ಆಗ್ತಾರೆ.. ನಾವು ಯಾರ ಪರ-ವಿರೋಧ ನಿಲ್ಲೋದು ಬೇಡ.. ಸಚಿವರಾಗಿ ಈ ರೀತಿಯ ಚರ್ಚೆಯಲ್ಲಿ ಕಾಣಿಸಿಕೊಂಡ್ರೆ ನಮ್ಮ ಸ್ಥಾನದ ಮೇಲೂ ಪರಿಣಾಮ ಬೀರುತ್ತದೆ.. ಸದ್ಯ ಸಚಿವ ಸ್ಥಾನ ಸಿಕ್ಕಿದೆ, ಪಕ್ಷದಲ್ಲಿ ಹಲವರು ಪ್ರಭಾವಿಗಳಿದ್ದಾರೆ ಎಂದು ಇವರುಗಳು ಭಾವಿಸಿದಂತಿದೆ.. ಬಣ ರಾಜಕೀಯ ಅಂತ ಹೈಕಮಾಂಡ್ ಕೆಂಗ್ಗಣ್ಣಿಗೆ ಗುರಿಯಾದೋದು ಬೇಡ.. ಇನ್ನು ಡಿಸಿಎಂ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು.. ನಾವು ನಮ್ಮ ಇಲಾಖೆಯ ಬಗ್ಗೆ ಗಮನ ನೀಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.