Publish Date: Wed, 20 Sep 2023 (19:05 IST)
Updated Date: Wed, 20 Sep 2023 (19:07 IST)
ರಾಜ್ಯದಲ್ಲಿ ಮೂರು ಡಿಸಿಎಂ ಕೋಲ್ಡ್ ವಾರ್ ಶುರುವಾಗಿದೆ.. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿದೆ. ಸಿಎಂ ಸಿದ್ದರಾಮಯ್ಯರ ಆಪ್ತ K.N.ರಾಜಣ್ಣ ಮೂವರು ಡಿಸಿಎಂ ಇರಬೇಕೆಂದು ಒತ್ತಾಯಿಸಿದ್ರು. ಸಿಎಂ ಸಿದ್ದರಾಮಯ್ಯ ತನ್ನ ಆಪ್ತನ ಮೂಲಕ ಈ ಮಾತನ್ನು ಹೇಳಿಸಿದ್ರು ಎಂಬ ಆರೋಪ ಸಹ ಕೇಳಿ ಬಂದಿತ್ತು.. ಸಿದ್ದು ವಿರುದ್ಧ ಡಿಕೆಶಿ ಬಣ ದಲಿತ ಸಿಎಂ ಬಾಣ ಬಿಟ್ಟಿತ್ತು. ಈ ಹಿನ್ನೆಲೆ ಡಿಸಿಎಂಗೆ ತಿರುಗೇಟು ನೀಡಲು ಸಿಎಂ ಬಣ ಮೂರು ಡಿಸಿಎಂ ಅಸ್ತ್ರ ಬಿಟ್ಟಿದೆ ಎನ್ನಲಾಗಿದೆ.. ಈ ಹಿನ್ನೆಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯರ ನಡುವೆ ಕೋಲ್ಡ್ವಾರ್ ಶುರುವಾಗಿದ್ಯಾ ಎಂಬ ಅನುಮಾನ ಮೂಡಿದೆ.
geetha
Publish Date: Wed, 20 Sep 2023 (19:05 IST)
Updated Date: Wed, 20 Sep 2023 (19:07 IST)