Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
SC/STಯವರಿಗೆ ಮೀಸಲಾತಿಯನ್ನು ನಮ್ಮ ಗಂಡೆದೆ ಸಿಎಂ ಬೊಮ್ಮಾಯಿ ಅವರಿಂದ ಮಾತ್ರ ಕೋಡೊಕೆ ಸಾಧ್ಯ ಆಯ್ತು ಎಂದು ಸಚಿವ ಅಶೋಕ್ ಹೇಳಿದ್ರು. ಈ ವಿಚಾರದ ಕುರಿತಾಗಿ ಮಾಜಿ ಸಿಎಂ H.D.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗಂಡೆದೆ ಮುಖ್ಯಮಂತ್ರಿ ಆಗಿದ್ದವರು ಎರಡು ವರ್ಷ ಯಾಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ.. ಇದೊಂದು ಚುನಾವಣೆ ಸ್ಟಂಟ್ ಅಷ್ಟೆ. ST ಸಮುದಾಯಕ್ಕೆ ಮೀಸಲಾತಿ ಅಂತ ಕೊಟ್ಟವರು ದೇವೇಗೌಡರು.ದೇವೇಗೌಡ ಮುಂದೆ ಯಾವುದೇ ಗಂಡೆದೆ ಮುಖ್ಯಮಂತ್ರಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ರು. ಮುಂದುವರಿದು ಮಾತನಾಡಿದ ಅವರು ಚುನಾವಣೆ ಹತ್ತಿರ ಬಂದಾಗ ಮೀಸಲಾತಿ ಕೊಟ್ಟಿದ್ದಾರೆ. ಇವರಿಗೆ ಗಂಡೆದೆ ಇದ್ದಿದ್ದರೆ ಪ್ರಸನ್ನಾನಂದಪುರಿ ಸ್ವಾಮೀಜಿಯನ್ನು ಯಾಕೆ 252 ದಿನ ಧರಣಿ ಕೂರಿಸುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಮೀಸಲಾತಿ ನೀಡಿದ್ರಲ್ಲಿ ನಮ್ಮ ಸಹಕಾರವೂ ಇದೆ. ನಮ್ಮ ಸಹಕಾರದಿಂದ ಅವರ ಗಂಡೆದೆ ಹೊರ ಬಂದಿದೆ. ಇಲ್ಲದೆ ಹೋಗಿದ್ರೆ ಹೆಣ್ಣೆದೆ ಹೊರಗೆ ಬರ್ತಿತ್ತು ಎಂದ HDK ತಕ್ಷಣ ಮಾತು ಬದಲಿಸಿ ನನಗೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇದೆ ಎಂದು ಮಾತನ್ನು ತೇಲಿಸಿದ್ರು