ಓಲಾ, ಉಬರ್ ಗ್ರಾಹಕರಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಮುಂದಾದ ಸರ್ಕಾರ 15 ದಿನದೊಳಗೆ ಹೊಸ ದರ ಫಿಕ್ಸ್ ಮಾಡುವಂತೆ ತಿಳಿಸಿತ್ತು. ಆದರೆ ಓಲಾ, ಉಬರ್ ಕಂಪನಿಗಳು ಹೊಸ ದರ ನಿಗದಿಗೊಳಿಸಲು ಮುಂದಾಗಿಲ್ಲ. ಡೆಡ್ಲೈನ್ ಮುಗಿಯುತ್ತಾ ಬಂದರೂ ಓಲಾ, ಉಬರ್ ಸೈಲೆಂಟ್ ಆಗಿದೆ. ಇದ್ರಿಂದಾಗಿ ಸರ್ಕಾರವೇ ಹೊಸ ದರ ಫಿಕ್ಸ್ ಮಾಡೋಕೆ ಪ್ಲ್ಯಾನ್ ಮಾಡಿದೆ. GST ಜೊತೆಗೆ ಹೊಸ ದರವನ್ನು ಸರ್ಕಾರ ಫಿಕ್ಸ್ ಮಾಡಲಿದೆ. ಸದ್ಯ 2 kmಗೆ 30 ರೂಪಾಯಿಯನ್ನು ಸಾರಿಗೆ ಇಲಾಖೆ ನಿಗದಿ ಮಾಡಿದೆ. ಆದರೆ ಮಿನಿಮಮ್ ದರ 100 ರೂಪಾಯಿಯನ್ನು ಓಲಾ, ಉಬರ್ ವಸೂಲಿ ಮಾಡ್ತಿದೆ. ಆದ್ರಿಂದ ಸರ್ಕಾರವೇ ಹೊಸ ದರ ನಿಗದಿಗೆ ಮುಂದಾಗಿದೆ.