Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೇದಾರನಾಥ ದೇವಸ್ಥಾನ ಕ್ಲೋಸ್​​​

ಕೇದಾರನಾಥ ದೇವಸ್ಥಾನ ಕ್ಲೋಸ್​​​
ಉತ್ತರಾಖಂಡ , ಗುರುವಾರ, 27 ಅಕ್ಟೋಬರ್ 2022 (16:48 IST)
ಚಳಿಗಾಲ ಆರಂಭವಾಗ್ತಿದೆ. ಆದ್ರಿಂದ ಉತ್ತರಾಖಂಡದ ವಿಶ್ವವಿಖ್ಯಾತ ಕೇದಾರನಾಥ ಧಾಮದ ಬಾಗಿಲು  ಮುಚ್ಚಲ್ಪಟ್ಟಿದೆ. ಬಾಗಿಲು ಮುಚ್ಚುವ ಮೊದಲು ಕೇದಾರನಾಥ ಧಾಮಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದು, ಮಹಾದೇವರ ಆರಾಧನೆಯನ್ನು ನೆರವೇರಿಸಲಾಯಿತು. ಕೇದಾರನಾಥ ಧಾಮದ ಬಾಗಿಲು ಮುಚ್ಚಿದ ನಂತರ ಭಗವಾನ್ ಕೇದಾರನಾಥ ಜೀ ಉಖಿಮಠದಲ್ಲಿ ಕುಳಿತುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಅವರ ದರ್ಶನಕ್ಕೆ ಭಕ್ತರು ಅಲ್ಲಿಗೆ ಹೋಗಬಹುದು. ದೇವರ ಡೋಲಿಯನ್ನು ಸೇನೆಯ ಸಾಂಪ್ರದಾಯಿಕ ಬ್ಯಾಂಡ್‌ನೊಂದಿಗೆ ಅಲ್ಲಿಗೆ ಕಳುಹಿಸಿಕೊಡಲಾಗುತ್ತೆ. ಕೇದಾರನಾಥದ ಐದು ಮುಖದ ಡೋಲಿಯನ್ನು ಬುಧವಾರ ಸಿದ್ಧಪಡಿಸಲಾಗಿದ್ದು, ಅಕ್ಟೋಬರ್ 29 ರಂದು ಡೋಲಿಯ ಚಳಿಗಾಲದ ತಾಣವಾದ ಉಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನಾಂಬೆ ದೇಗುಲ ಬಂದ್