Publish Date: Mon, 15 Jul 2019 (10:11 IST)
Updated Date: Mon, 15 Jul 2019 (10:14 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ಎಚ್ ಡಿ ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ಬಂಡಾಯ ಶಾಸಕರ ಮನ ಒಲಿಕೆಗೆ ಕಸರತ್ತು ನಡೆಸುತ್ತಿದ್ದರೆ, ಇತ್ತ ಸಚಿವ ಎಚ್ ಡಿ ರೇವಣ್ಣ ದೇವರ ಮೊರೆ ಹೋಗಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು ದುರ್ಗಾಪರಮೇಶ್ವರಿ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಿಗೆ ಭೇಟಿ ಕೊಟ್ಟು ಪೂಜೆ ಪುನಸ್ಕಾರ ನಡೆಸುತ್ತಿರುವ ಎಚ್ ಡಿ ರೇವಣ್ಣ ಸರ್ಕಾರ ಉಳಿವಿಗಾಗಿ ದೈವದ ಮೊರೆ ಹೋಗಿದ್ದಾರೆ.
ಇದೇ ವೇಳೆ ರೇವಣ್ಣ ಟೆಂಪಲ್ ರನ್ ಮುಂದುವರಿಸಿರುವ ಬಗ್ಗೆ ಮಾಧ್ಯಮಗಳು ಫೋಟೋ ತೆಗೆಯಲು ಮುಂದಾದಾಗ ಸಿಟ್ಟಿಗೆದ್ದು ಫೋಟೋ ಅಳಿಸಿ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಿದ ಘಟನೆ ಕಟೀಲು ದೇವಾಲಯದಲ್ಲಿ ನಡೆದಿದೆ. ಮಾಧ್ಯಮಗಳ ವಿರುದ್ಧ ಸಿಟ್ಟಿಗೆದ್ದ ರೇವಣ್ಣ ದೇವಾಲಯದಲ್ಲಿ ತಾವು ಪ್ರಸಾದ ಸ್ವೀಕರಿಸುತ್ತಿರುವ ಫೋಟೋ ಅಳಿಸಿ ಹಾಕಲು ಅಲ್ಲಿದ್ದ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.