Publish Date: Sat, 13 Jul 2019 (18:28 IST)
Updated Date: Sat, 13 Jul 2019 (18:31 IST)
ಮೈತ್ರಿ ಸರಕಾರದ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿರೋ ಬಿ.ಸಿ.ಪಾಟೀಲ್ ರ ಮತಕ್ಷೇತ್ರದಲ್ಲಿ ಕೈ ಪಡೆ ಕಾರ್ಯಕರ್ತರು ಗರಂ ಆಗಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ಮತಕ್ಷೇತ್ರದ ಶಾಸಕ ಬಿ.ಸಿ ಪಾಟೀಲ್ ವಾಪಸ್ ಬರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತರು ಹಿರೇಕೆರೂರು ಪಟ್ಟಣದಲ್ಲಿ ಧರಣಿ ನಡೆಸಿದ್ದಾರೆ.
ಸರ್ವಜ್ಞ ವೃತ್ತದಲ್ಲಿ ಬಿ.ಸಿ. ಪಾಟೀಲ್ ವಾಪಸ್ ಬನ್ನಿ ಅಂತ ಕೂಗಿ ಪ್ರತಿಭಟನೆ ನಡೆಸಿದ್ರು. ಬಿ.ಸಿ ಪಾಟೀಲ್ ಮುಂಬೈಯಿಂದ ವಾಪಸ್ ಆಗಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿದ್ದಾರೆ.