ಬೆಂಗಳೂರು: ರಾಜ್ಯದ ರಾಜಕೀಯದಲ್ಲಿ ಮೂಡಿರುವ ಸಂದಿಗ್ಧತೆಗಳ ಕುರಿತು ಸ್ಪೀಕರ್ ರಮೇಶ್ ಕುಮಾರ್ ಮಾಧ್ಯಮಗಳೊಂದಿಗೆ ತಮ್ಮದೇ ದಾಟಿಯಲ್ಲಿ ಮಾತನಾಡಿದ್ದಾರೆ.
ಒಂದೆಡೆ ಸ್ಪೀಕರ್ ರಮೇಶ್ ಕುಮಾರ್ ಶಾಸಕರ ರಾಜೀನಾಮೆಯನ್ನು ಇನ್ನೂ ಅಂಗೀಕರಿಸದೇ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಟೀಕೆ ಮಾಡುತ್ತಿದ್ದರೆ, ಆ ಟೀಕಾಕಾರರ ಬಗ್ಗೆ ರಮೇಶ್ ಕುಮಾರ್ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಗಾಂಧೀಜಿಯನ್ನೇ ಕೊಂದ ದೇಶವಿದು. ಇನ್ನು ನನ್ನನ್ನು ಬಿಡ್ತಾರಾ? ನಮಸ್ಕಾರ ಮಾಡುವ ನೆಪದಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ಶೂಟ್ ಮಾಡಿದರು. ಗಾಂಧೀಜಿಯನ್ನು ಕೊಲ್ಲಲು ಪಿಸ್ತೂಲ್ ಬೇಕಿತ್ತಾ? ಒಂದು ದೊಣ್ಣೆ ತೆಗೆದುಕೊಂಡು ಹೊಡೆದರೂ ಸಾಕಿತ್ತು. ಗಾಂಧೀಜಿಯನ್ನು ಕೊಂದರೂ ಅವರ ಮೌಲ್ಯಗಳು ಯಾವತ್ತೂ ಸಾಯಲ್ಲ. ಅವರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾವು ಕೊಲ್ಲಲು ಬಿಡಲ್ಲ’ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.