Publish Date: Sun, 19 Feb 2023 (20:18 IST)
Updated Date: Sun, 19 Feb 2023 (20:21 IST)
ಹಾಸನ ಜಿಲ್ಲೆಯಲ್ಲಿ ಯಾರು ಅಭ್ಯರ್ಥಿ ಎಂಬುದು ಸ್ವಲ್ಪ ಗೊಂದಲದಲ್ಲಿದೆ. ಈ ಪ್ರಶ್ನೆ ಗಳಿಗೆ ಈಗ ಸ್ವತಹ ಹೆಚ್ಡಿ ಕುಮಾರಸ್ವಾಮಿ ಸ್ವಷ್ಟತೆ ನೀಡಿದ್ದಾರೆ . ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕಿದೆ ಬೆಳಗ್ಗೆ ಎದ್ದರೆ ಎಲ್ಲಾ ಟಿವಿಯಲ್ಲಿ ಹಾಸನ ಟಿಕೆಟ್ ಬಗ್ಗೆ ಚರ್ಚೆ ಮಾಡ್ತಾರೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಶ್ರೀಘ್ರದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇನೆ ಪಕ್ಷದ ಕಾರ್ಯಕರ್ತರ ಇಡೀ ಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೆಚ್ಡಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ .