Publish Date: Thu, 09 Feb 2023 (15:56 IST)
Updated Date: Thu, 09 Feb 2023 (15:59 IST)
ಬ್ರಾಹ್ಮಣರ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಉತ್ತರ ಕನ್ನಡ ಗೋಕರ್ಣದ ಗಣಪತಿ ದೇವಾಲಯದ ಅರ್ಚಕರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ತಂದೆ ನಿಮ್ಮ ಬಗ್ಗೆ ಅಪಾರವಾದ ಗೌರವವಿದೆ. ಆದರೆ ಇತ್ತೀಚೆಗೆ ನೀವು ಬಳಸಿದ ಪದ ಬಳಕೆ ಬಗ್ಗೆ ನಮಗೆ ಬೇಜಾರಾಗಿದೆ. ಗೋಕರ್ಣದಲ್ಲೇ ಬ್ರಾಹ್ಮಣ ಪದ ಬಳಕೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಅರ್ಚಕರು ಪಟ್ಟು ಹಿಡಿದರು. ಇನ್ನು ಇದಕ್ಕೆ ಉತ್ತರಿಸಿದ ಹೆಚ್.ಡಿ.ಕೆ ನಾನು ಬ್ರಾಹ್ಮಣ ವಿರೋಧಿ ಅಲ್ಲ, ಬ್ರಾಹ್ಮಣರ ವಿರೋಧಿ ಹೇಳಿಕೆ ನೀಡಿಲ್ಲ ಎಂದರು. ನಾನು ನೀಡಿದ ಹೇಳಿಕೆ ಬಗ್ಗೆ ಅನೇಕ ಬ್ರಾಹ್ಮಣ ನಾಯಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವರು ಮಾತ್ರ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.