ಹಿಂದೂ ಹರ್ಷನ ಕೊಲೆ ಸಿಗೇಹಟ್ಟಿ ಸಮೀಪದ ಭಾರತಿ ಕಾಲೋನಿ ಕ್ರಾಸ್ ನಲ್ಲಿ ಸಂಭವಿಸಿತ್ತು. ಅದರ ಬಳಿಕ ನಿನ್ನೆ ನಡೆದ ಅಂತ್ಯಸಂಸ್ಕಾರದ ಮೆರವಣಿಗೆ ವೇಳೆ ಕಲ್ಲೂತೂರಾಟ, ಲಾಠಿ ಪ್ರಹಾರ, ಟಿಯರ್ ಗ್ಯಾಸ್ ಪ್ರಯೋಗಗಳು ನಡೆದಿದ್ದವು.ಇದಾದ ಬಳಿಕ ನಿನ್ನೆ ರಾತ್ರಿಯೇ ಶಿವಮೊಗ್ಗ ಜಿಲ್ಲಾಡಳಿತ 144 ಸೆಕ್ಷನ್ನ್ನ ವಿಸ್ತರಿಸಿ, ಕರ್ಪ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿತ್ತು.
ನಿನ್ನೆ ನಡೆದ ಘಟನೆಗಳಾದರೇ, ಇವತ್ತು ಶಿವಮೊಗ್ಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತತ್ತಿತ್ತು. ಮುಖ್ಯವಾಗಿ ಎಲ್ಲೆಡೆ ಹೆಚ್ಚುವರಿ ಪೊಲೀ ಸರನ್ನ ನಿಯೋಜಿಸಲಾಗಿತ್ತು. ವಿವಿಧ ಜಿಲ್ಲೆಗಳಲ್ಲಿ ಶಿವಮೊಗ್ಗಕ್ಕೆ ಪೊಲೀಸರನ್ನ ಕರೆಸಿಕೊಳ್ಳಲಾಗಿದ್ದು, ಪ್ರತಿ ಏರಿಯಾದಲ್ಲಿಯು ಬ್ಯಾರಿಕೇಡ್ಗಳನ್ನ ಅಳವಡಿಸಿ ಸಂಪೂರ್ಣ ಸಂಚಾರ ಬಂದ್ ಮಾಡಲಾಗಿತ್ತು.
ತುಂಗಾನಗರದಲ್ಲಿ 2 ಆಟೋ ದ್ವಿಚಕ್ರ ವಾಹನಕ್ಕೆ ಬೆಂಕಿ
ಇನ್ನೂ ಇವತ್ತು ಬೆಳಗ್ಗಿನ ಜಾವವೇ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟಿಪ್ಪುನಗರ ಹಾಗೂ ಕೊರಮರಕೇರಿಯಲ್ಲಿ ಒಟ್ಟು ಮೂರು ಆಟೋ ಹಾಗೂ 2 ದಿಚಕ್ರವಾಹನಗಳಿಗೆ ಬೆಂಕಿ ಹಾಕಿದ್ದ ಘಟನೆ ವರದಿಯಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದೆ.
ಭದ್ರತೆಗಾಗಿ ಹೊರ ಜಿಲ್ಲೆಗಳ ಪೊಲೀಸರ ನಿಯೋಜನೆ
ಇನ್ನೂ ನಿನ್ನೆಯ ಘಟಾನವಳಿಗಳ ಹಿನ್ನೆಲೆಯಲ್ಲಿ ಇವತ್ತು ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿತ್ತು. ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಮೂವರು SP , Addl SP-01, DySP-12, PI-39, PSI-54, ASI-48, HC/PC-819 ಸೇರಿದಂತೆ 20-KSRP ತುಕಡಿಗಳು, 10-DAR ತುಕಡಿಗಳು ಮತ್ತು 01-RAF ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು.