Select Your Language

Notifications

webdunia
webdunia
webdunia
webdunia

ವರದಕ್ಷಿಣೆಗಾಗಿ ಸರ್ಜಿಕಲ್ ಬ್ಲೇಡ್ ನಿಂದ ಪತ್ನಿಯ ಕೊಂದ ಪತಿ

ವರದಕ್ಷಿಣೆ
ಲಕ್ನೋ: ವರದಕ್ಷಿಣೆ ತರುವಂತೆ ಕಿರಕುಳ ನೀಡುತ್ತಿದ್ದ ಗಂಡ ಮದ್ಯ ಸೇವಿಸಿ ಪತ್ನಿಯ ಮೇಲೆ ಸರ್ಜಿಕಲ್ ಬ್ಲೇಡ್ ನಿಂದ ದಾಳಿ ಮಾಡಿ ಕೊಲೆ ಮಾಡಿದ ಘಟನೆ ನಡೆದಿದೆ.

ಗಂಭೀರ ಗಾಯಗೊಂಡಿದ್ದ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ತನ್ನ ಗಂಡ ಮಾಡಿ ಹಲ್ಲೆ ಬಗ್ಗೆ ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಅದಾದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಮಹಿಳೆ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಪಾನಮತ್ತನಾಗಿ ಅಲ್ಲಿಗೆ ಬಂದಿದ್ದ ಗಂಡ ಪತ್ನಿಯ ಮೇಲೆ ದಾಳಿ ಮಾಡಿದ್ದ. ಐದು ವರ್ಷಗಳ ಹಿಂದೆ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಈಗ ಒಬ್ಬಳು ಮಗಳೂ ಇದ್ದಾಳೆ. ಆದರೆ ಇತ್ತೀಚೆಗೆ ಗಂಡ ವರದಕ್ಷಿಣೆಗಾಗಿ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರ ಭೇಟಿಯಾಗಲಿಲ್ಲವೆಂದು ಸಹೋದರನ ಅಪಹರಿಸಿದ ಮಹಿಳೆ!