Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಲಕ್ನೋ: ಅಕ್ರಮ ಸಂಬಂಧ ಹೊಂದಿದ್ದ 32 ವರ್ಷದ ಮಹಿಳೆ ತನ್ನ ಪ್ರಿಯಕರ ತನ್ನನ್ನು ಭೇಟಿಯಾಗದ ಆಕ್ರೋಶದಲ್ಲಿ ಆತನ 6 ವರ್ಷದ ಸಹೋದರನನ್ನು ಅಪಹರಿಸಿದ ಘಟನೆ ನಡೆದಿದೆ.
32 ವರ್ಷದ ಮಹಿಳೆಗೆ ಪಕ್ಕದ ಗ್ರಾಮದ 20 ವರ್ಷದ ಯುವಕನ ಜೊತೆ ಅಕ್ರಮ ಸಂಬಂಧವಿತ್ತು. ಕೆಲವು ತಿಂಗಳುಗಳ ಹಿಂದೆ ಯುವಕನಿಗೆ ಗುರ್ಗಾಂವ್ ನಲ್ಲಿ ನೌಕರಿ ಸಿಕ್ಕಿತ್ತು. ಹೀಗಾಗಿ ಕೆಲವು ತಿಂಗಳುಗಳಿಂದ ಈತ ಮಹಿಳೆಯನ್ನು ಭೇಟಿಯಾಗಲು ಬಂದಿರಲಿಲ್ಲ.
ಇದೇ ಕೋಪದಲ್ಲಿ ಮಹಿಳೆ ತನ್ನ ಅಳಿಯನ ಸಹಾಯದಿಂದ 6 ವರ್ಷದ ಬಾಲಕನನ್ನು ಅಪಹರಿಸಿದ್ದಳು. ಬಳಿಕ ಪ್ರಿಯಕರನಿಗೆ ಈ ವಿಚಾರ ಹೇಳಿದ್ದಳು. ವಿಚಾರ ತಿಳಿದೂ ಪ್ರಿಯಕರ ವಿಚಾರ ರಹಸ್ಯವಾಗಿಟ್ಟಿದ್ದ. ಇತ್ತ ಬಾಲಕನ ಮನೆಯವರು ಆತ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಘಟನೆ ಬಯಲಿಗೆ ಬಂದಿದೆ. ಇದೀಗ ಪ್ರೇಯಸಿ, ಆಕೆಯ ಸಂಬಂಧಿಕ ಮತ್ತು ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.