Publish Date: Thu, 20 Apr 2023 (18:41 IST)
Updated Date: Thu, 20 Apr 2023 (18:56 IST)
ಮಾಜಿ ಸಿಎಂ S.M. ಕೃಷ್ಣ ಸಹೋದರನ ಪುತ್ರ, ಕಾಂಗ್ರೆಸ್ ಟಿಕೆಟ್ ವಂಚಿತ ಎಸ್.ಗುರುಚರಣ್ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.. ಗುರುಚರಣ್ ಮಂಡ್ಯದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ಧ ಗುಡುಗಿದ್ರು.. ಜೆಡಿಎಸ್ ಸೇರ್ಪಡೆಯಾಗುತ್ತಿದ್ದಂತೆ KPCC ಅಧ್ಯಕ್ಷ D.K.ಶಿವಕುಮಾರ್ ವಿರುದ್ದ ಗುರುಚರಣ್ ಕೆಂಡಾಮಂಡಲರಾಗಿದ್ದಾರೆ.. ಡಿಕೆಶಿ ನಿನಗೆ ಟಿಕೆಟ್ ಎಂದು ಹೇಳಿ-ಹೇಳಿ ನನ್ನನ್ನ ಮುಗಿಸಿದ್ರು, ಕಾಂಗ್ರೆಸ್ ಪಕ್ಷ ಇನ್ನು ನಿರ್ನಾಮವಾಗೋದಂತು ಸತ್ಯ. ದುಡ್ಡು ಕೊಟ್ರೆ ಟೆರರಿಸ್ಟ್ಗಳಿಗೂ ಬೇಕಾದ್ರು ಕಾಂಗ್ರೆಸ್ನವ್ರು ಟಿಕೆಟ್ ಕೊಟ್ಟು ಬಿಡ್ತಾರೆ ಎಂದು ಕಿಡಿಕಾರಿದ್ರು.. ಮದ್ದೂರಿನ ಮಕ್ಕಳು ಹಾಳಾಗಿ ಹೋಗ್ತಿದ್ದಾರೆ.. ಬೆಟ್ಟಿಂಗ್ ದಂಧೆ ಎಗ್ಗಿಲ್ಲದೆ ಸಾಗ್ತಿದೆ ಎಂದರು. ಗುರುಚರಣ್ ಪರೋಕ್ಷವಾಗಿ ಕದಲೂರು ಉದಯ್ ಅನ್ನು ಗ್ಯಾಂಬ್ಲರ್ ಎಂದು ಆರೋಪಿಸಿದ್ದಾರೆ.