Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸಿಲಿಕಾನ್ ಸಿಟಿ ಜನರು ನಿತ್ಯ ಸಂಭವಿಸುವ ಟ್ರಾಫಿಕ್ ಜಾಮ್ ನಂತಹ ಸಮಸ್ಯೆಗೆ ಬೇಸೆತ್ತು ಹೋಗಿದ್ದಾರೆ. ಯಾವುದೇ ರಸ್ತೆ ನೋಡಿದ್ರು ಟ್ರಾಫಿಕ್ ನಿಂದ ಕೂಡಿರುತ್ತೆ. ಆದ್ರೆ ಹೃದಯಭಾಗದ ಗೂಡ್ಸ್ ಶೆಡ್ ರೋಡ್ ನ್ನ ಸ್ಥಿತಿ ಸಂಪೂರ್ಣವಾಗಿ ಆಧ್ವಾನವಾಗೋಗಿದೆ. ಕಿರಿದಾದ ರಸ್ತೆಯಿಂದ ಒಂದು ಕಡೆ ಸಮಸ್ಯೆಯಾದ್ರೆ , ಮತ್ತೊಂದು ಕಡೆ ರಸ್ತೆಯ ಕಾಮಗಾರಿ ಮಾಡುವುದಕ್ಕಾಗಿ ರಸ್ತೆ ಬಂದ್ ಮಾಡಿ ಇನ್ನಿಲ್ಲದ ಸಮಸ್ಯೆಯಾಗುವಂತೆ ಮಾಡಿದ್ದಾರೆ. ಈ ಒಂದು ರಸ್ತೆಯಿಂದ ಸುತ್ತ ಟ್ರಾಫಿಕ್ ಜಾಮ್ ಸಮಸ್ಯೆ ಉಲ್ಬಣಿಸಿದೆ.ಇನ್ನೂ ಈ ಒಂದು ರಸ್ತೆಯಿಂದ ನಿತ್ಯ ಮೈಸೂರು ರಸ್ತೆಯಿಂದ ಮೆಜಸ್ಟಿಕ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಸುತ್ತ- ಮುತ್ತ ಟ್ರಾಫಿಕ್ ಜಾಮ್ ಸಂಭವಿಸುತ್ತದೆ, ಇನ್ನೂ ಈ ಕಿರಿದಾದ ಗೂಡ್ಸ್ ಶೆಡ್ ರೋಡ್ ನಲ್ಲಿ ಈಗ ಬೇರೆ ಟೂವೀಲರ್ ಮಾತ್ರ ಓಡಾಡಲು ಸಾಧ್ಯ. ಅದು ಬಿಟ್ರೆ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಓಡಾಡಲು ಆಗುವುದಿಲ್ಲ. ಈ ಒಂದು ರಸ್ತೆಯಿಂದ ಬಿನ್ನಿಮೀಲ್, ಮೆಜಸ್ಟಿಕ್ , ಮೈಸೂರು ರೋಡ್ ಸೇರಿದಂತೆ ನಗರದ ಹಲವಡೆ ಟ್ರಾಫಿಕ್ ಜಾಮ್ ನಂತಹ ಸಮಸ್ಯೆ ಸಂಂಭವಿಸುತ್ತದೆ. ಇನ್ನೂ ಈ ರಸ್ತೆ ಈಗಾಗಲ್ಲೇ ಕ್ಲೋಸ್ ಆಗಿ 2 ತಿಂಗಳಾಗ್ತಿದೆ. ಆದ್ರೆ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಕೆಲಸವು ಆಗ್ತಿಲ್ಲ, ಕಾಮಗಾರಿ ಕೆಲಸವು ಮಾಗ್ತಿಲ್ಲ..ಇನ್ನೂ ಇಂಜಿನಿಯರ್ ಹೆಸರಿಗೆ ಮಾತ್ರ ಇದ್ದಾರೆ. ಇಂಜಿನಿಯರ್ ಇದ್ರೂ ಯಾವುದೇ ಉಪಯೋಗ ಇಲ್ಲದಂತೆಯಾಗಿದೆ. ಈ ಒಂದು ರಸ್ತೆಯಿಂದ ಸುತ್ತ- ಮತ್ತು ಗಲ್ಲಿಗಳಲ್ಲೂ ಟ್ರಾಫಿಕ್ ಸಮಸ್ಯೆ ಉಂಟಾಗ್ತಿದೆ . ಆದ್ರೂ ಅಧಿಕಾರಿಗಳು ಇತ್ತಾ ಗಮನಹಾರಿಸುತ್ತಿಲ್ಲ. ಹೀಗಾಗಿ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೇತ್ತುಕೊಂಡು ಕ್ರಮಕೈಗೋಳ್ತಾರಾ? ಎಂಬುದನ್ನ ಕಾದು ನೋಡಬೇಕಿದೆ.