Publish Date: Thursday, 21 April 2022 (21:02 IST)
Updated Date: Thursday, 21 April 2022 (21:04 IST)
ಇಂದು ಬೆಳಗ್ಗೆ ಉಡುಪಿ-ಮಣಿಪಾಲ ರಸ್ತೆಯಲ್ಲಿ ಅಗ್ನಿ ಅವಘಡ ನಡೆದಿದೆ. ಮಣಿಪಾಲ ಲಕ್ಷ್ಮೀನಗರ ಬಳಿ ಇರುವ ಸುಧಾ ಫರ್ನಿಚರ್ಸ್ ಬೆಂಕಿಗೆ ಆಹುತಿಯಾಗಿದೆ. ಫರ್ನಿಚರ್ ಅಂಗಡಿಯ ಜೊತೆಗೆ ಹೋಟೆಲ್ ಕೂಡ ಬೆಂಕಿಗೆ ಆಹುತಿಯಾಗಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿರುವ ಸಾಧ್ಯತೆ ಇದೆ. ಅಪಾರ ಪ್ರಮಾಣದಲ್ಲಿ ಫರ್ನಿಚರ್ಸ್ ಮತ್ತು ಕಚ್ಚಾ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, 40 ಲಕ್ಷಕ್ಕೂ ಮೇಲ್ಪಟ್ಟು ನಷ್ಟ ಸಂಭವಿಸಿರುವ ಸಾಧ್ಯತೆ ಇದೆ.