Publish Date: Sat, 05 Mar 2022 (09:10 IST)
Updated Date: Sat, 05 Mar 2022 (09:12 IST)
ಲಕ್ನೋ : ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಟ್ಕಾ ಚಾಯ್ ಸವಿದಿದ್ದಾರೆ.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಮಾರ್ಚ್ 7 ರಂದು ಏಳನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯ ವಿವಿಧ ಪ್ರದೇಶಗಳಲ್ಲಿ ಬೃಹತ್ ರೋಡ್ಶೋ ನಡೆಸಿದ್ದಾರೆ.
ನಗರದ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಂತರ ಮೋದಿ ಅವರು ನಗರದ ಸ್ಥಳೀಯ ಟೀ ಸ್ಟಾಲ್ವೊಂದರಲ್ಲಿ ಮಟ್ಕಾ ಚಾಯ್ ಸವಿದಿದ್ದಾರೆ. ಮಡಿಕೆಯಲ್ಲಿ ಚಹಾವನ್ನು ಮೋದಿ ಜೊತೆಗೆ ಅನೇಕ ನಾಯಕರು ಸಹ ಸವಿದಿದ್ದಾರೆ.
ಮೋದಿ ಅವರು ಸ್ಥಳೀಯ ಟೀ ಸ್ಟಾಲ್ನಲ್ಲಿ ಕುಳಿತು ಜನರೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಚಹಾವನ್ನು ಸವಿಯುತ್ತಾ ಆನಂದಿಸುತ್ತಿರುವುದನ್ನು ನಾವು ವೀಡಿಯೋದಲ್ಲಿ ನೋಡ ಬಹುದಾಗಿದೆ. ಮೋದಿ ಮಾರ್ಚ್ 4, 5 ರಂದು ವಾರಣಾಸಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.