Publish Date: Thu, 04 Jun 2020 (19:25 IST)
Updated Date: Thu, 04 Jun 2020 (19:27 IST)
ದಲಿತ, ಹರಿಜನ, ಗಿರಿಜನ ಎನ್ನುವ ಪದಗಳನ್ನು ಇನ್ಮುಂದೆ ಬಳಸುವಂತಿಲ್ಲ.
ಕೇಂದ್ರ ಗೃಹ ಸಚಿವಾಲಯ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಆಡಳಿತ ಭಾಷೆ, ಪತ್ರವ್ಯವಹಾರ, ಪ್ರಮಾಣ ಪತ್ರಗಳಲ್ಲಿ `ದಲಿತ’ ಎನ್ನುವ ಪದವನ್ನು ಬಳಸದಂತೆ ಸಮಾಜ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದೆ ಎಂದು ಉಪಮುಖ್ಯಮಂತ್ರಿಯವರಾದ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.
ಹರಿಜನ ಮತ್ತು ಗಿರಿಜನ ಎನ್ನುವ ಪದವನ್ನು ಬಳಕೆ ಮಾಡಬಾರದು. ಆಂಗ್ಲ ಭಾಷೆಯಲ್ಲಿ ಎಸ್‍ಸಿ, ಎಸ್‍ಟಿ ಎಂದು ನಮೂದಿಸಬಹುದಾಗಿದೆ. ಇತರೇ ಭಾಷೆಗಳಲ್ಲಿ ಸೂಕ್ತ ಭಾಷಾಂತರಗೊಳಿಸಿದ ಪದವನ್ನು ಬಳಸಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಎಂದು ನಮೂದಿಸಬಹುದಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.