Publish Date: Thu, 04 Jun 2020 (18:22 IST)
Updated Date: Thu, 04 Jun 2020 (18:24 IST)
ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿರುವ ಕೆಲವು ಶಾಸಕರ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಹಿರಿಯ ಸಚಿವರೊಬ್ಬರು ನನಗೇನೂ ಗೊತ್ತೇ ಇಲ್ಲ ಎಂದಿದ್ದಾರೆ.
ನನಗೇನೂ ಗೊತ್ತಿಲ್ಲ, ಎಲ್ಲರೂ ಒಂದೆಡೆ ಸೇರಬಾರದಾ? ಊಟಕ್ಕೆ ಸೇರಿದ್ದಾರೆ ಎಂದಿದ್ದಾರೆ.
ಅನಿವಾರ್ಯವಾಗಿ ಕೆಲವು ಆಗಲೇಬೇಕಿದೆ. ರಮೇಶ್ ಕತ್ತಿ, ಉಮೇಶ್ ಕತ್ತಿ ಏನ್ ಮಾಡಿದಾರೋ ನನಗೆ ಗೊತ್ತಿಲ್ಲ ಎಂದು ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರ ಕೊಡದೆ ಕೆ.ಎಸ್. ಈಶ್ವರಪ್ಪ ಎದ್ದು ನಿಂತ ಘಟನೆ ನಡೆದಿದೆ.
ಇನ್ನು, ಮಂತ್ರಾಲಯ ಮಠಕ್ಕೆ ಹೋಗಿ ದರ್ಶನ ಮಾಡಿಕೊಂಡು ಬಂದಿರುವೆ. ಇಡೀ ದೇಶಕ್ಕೆ ಕೊರೊನಾ ಬಂದಿದೆ. ಪ್ರಾರ್ಥನೆ ಮಾಡಲು ಮಂತ್ರಾಲಯಕ್ಕೆ ಹೋಗಿದ್ದೆ.
ದೇಶದಲ್ಲಿ ಮೋದಿ ಹೀರೋ ಆಗಿದ್ದಾರೆ. ಆದ್ರೂ ಎಲ್ಲರನ್ನೂ ಕಾಪಾಡಬೇಕು ಅಂತ ರಾಯರ ದರ್ಶನ ಮಾಡಿಕೊಂಡು ಬಂದಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.