Publish Date: Thu, 04 Jun 2020 (18:43 IST)
Updated Date: Thu, 04 Jun 2020 (18:44 IST)
ಪ್ರಧಾನಿ ನರೇಂದ್ರ ಮೋದಿಯವರ ಪಾರದರ್ಶಕ ಆಡಳಿತವೇ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಬಿಜೆಪಿ ಸಂಸದರೊಬ್ಬರು ಹೇಳಿದ್ದಾರೆ.
ಪ್ರಧಾನಿ ಅತ್ಯಂತ ಮಹತ್ವದ ನಿರ್ಧಾರ ಹಾಗೂ ಜನಪ್ರೀಯ ಯೋಜನೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅದರಂತೆ ಅಭಿವೃದ್ಧಿ ಕೆಲಸಗಳು ನಡೆಸುವ ಮೂಲಕ ಎರಡನೇ ಅವಧಿಯ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ್ದಾರೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ತ್ರಿವಳಿ ತಲಾಕ್, ಒಂದೇ ದೇಶ ಒಂದೇ ಕಾನೂನು, ಪೌರತ್ವ ತಿದ್ದುಪಡಿ ಮಾಡುವ ಮೂಲಕ ಭಾರತೀಯರಿಗೆ ತಮ್ಮ ಹಕ್ಕನ್ನು ನೀಡಿದ್ದಾರೆ. ಅಲ್ಲದೇ ರಾಮಮಂದಿರ ತೀರ್ಪು ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತೆ ವಹಿಸಿದ್ದು ಶ್ಲಾಘನೀಯ. ಕೊರೊನಾ ಮಹಾಮಾರಿ ವಿರುದ್ಧ ಕೇಂದ್ರ ಸರ್ಕಾರ ಉತ್ತಮವಾಗಿ ಹೋರಾಟ ಮಾಡಿದೆ ಎಂದಿದ್ದಾರೆ.