Publish Date: Mon, 03 Apr 2023 (21:50 IST)
Updated Date: Mon, 03 Apr 2023 (20:51 IST)
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿಯಾದ ಅಭಿಮಾನಿಯೋರ್ವ ದೇವರ ಮೊರೆ ಹೋಗಿದ್ದಾರೆ.. ಗುರುಮಣಿಕಂಠ ಅಯ್ಯಪ್ಪ ಮಾಲೆ ಧರಿಸಿ ದೇವರ ಮೊರೆ ಹೋಗಿದ್ದಾರೆ. ಕೇರಳದ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಸಿದ್ದು ಸಿಎಂ ಆಗಬೇಕೆಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಮತ್ತೆ ಪ್ರಚಂಡ ಬಹುಮತದಿಂದ ಗೆದ್ದು ಮತ್ತೆ ರಾಜ್ಯದಲ್ಲಿ ಸಿಎಂ ಆಗಬೇಕು, ಶಹಾಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಮತ್ತೆ MLA ಆಗಬೇಕು ಎಂದು ಪೂಜೆ ಸಲ್ಲಿಸಿದ್ದಾರೆ.. ಕೈಯಲ್ಲಿ ಸಿದ್ದರಾಮಯ್ಯ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರ ಭಾವ ಚಿತ್ರ ಹೀಡಿದು ಅಯ್ಯಪ್ಪ ಸ್ವಾಮಿ ಮೊರೆ ಹೋಗಲಾಗಿದ್ದು, ಇರುಮುಡಿ ಕಟ್ಟಿ ನಂತರ ಅಷ್ಟಾಭೀಷಕ, ಪುಷ್ಪ ಅಭಿಷೇಕ ಪೂಜೆ ಮಾಡಿಸಲಾಗಿದೆ. ಶಾಸಕ ಶರಣಬಸಪ್ಪ ದರ್ಶನಾಪುರ ಪವರ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್ನಲ್ಲಿ ಸಿಕ್ಕಿಬಿದ್ದಿದ್ರು. ಶಾಸಕರು ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ ಲಂಚ ಪಡೆದಿದ್ದ ದೃಶ್ಯ ಪವರ್ ಟಿವಿಯಲ್ಲಿ ಪ್ರಸಾರವಾಗಿತ್ತು.