Publish Date: Mon, 03 Apr 2023 (20:00 IST)
Updated Date: Mon, 03 Apr 2023 (19:39 IST)
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸಿರುವ ಹೊತ್ತಲ್ಲೇ ಪಕ್ಷಾಂತರ ಪರ್ವ ಮತ್ತೆ ಶುರುವಾಗಿದೆ. ಜೆಡಿಎಸ್ ಅರಸೀಕೆರೆ ಶಾಸಕ ಶಿವಲಿಂಗೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇದೀಗ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ.. ಬಿಜೆಪಿ ಶಾಸಕ N.Y. ಗೋಪಾಲಕೃಷ್ಣ ಕೂಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.. ಬೆಂಗಳೂರಿನ KPCC ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, KPCC ಅಧ್ಯಕ್ಷ D.K. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.. ಅರಸೀಕೆರೆಯಿಂದ ಶಿವಲಿಂಗೇಗೌಡಗೆ ಕಾಂಗ್ರೆಸ್ ಟಿಕೆಟ್ ಕನ್ಫರ್ಮ್ ಆಗಿದ್ದು, ಕೂಡ್ಲಿಗಿಯಿಂದಲೇ ಕೈ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಕಣಕ್ಕೆ ಇಳಿಯಲಿದ್ದಾರೆ.