Publish Date: Mon, 03 Apr 2023 (20:43 IST)
Updated Date: Mon, 03 Apr 2023 (20:49 IST)
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ.. ಈ ಹಿನ್ನೆಲೆಯಲ್ಲಿ ಟಿಕೆಟ್ ಸಿಗದ ಆಕಾಂಕ್ಷಿಗಳು ಟಿಕೆಟ್ ಸಿಗುವ ಪಕ್ಷಕ್ಕೆ ಜಂಪ್ ಮಾಡ್ತಿದ್ದಾರೆ. BJP ಆಪರೇಷನ್ ಕಮಲ ಮಾಡಿ ರಾಜ್ಯಾದ್ಯಂತ ಆಪರೇಷನ್ ಸ್ಪೆಷಲಿಸ್ಟ್ ಆಗಿದೆ. ಇದೀಗ BJP ರಿವರ್ಸ್ ಆಪರೇಷನ್ ಮಾಡಿ ಮತ್ತೆ ಕಾಂಗ್ರೆಸ್ಗೆ ಶಾಕ್ ಕೊಡಲು ಮುಂದಾಗಿದೆ.. ಮಾಜಿ ಶಾಸಕ B.H. ಬನ್ನಿಕೋಡಗೆ BJP ಗಾಳ ಹಾಕಿದೆ. ಬಣಕಾರ್ಗೆ ಹಿರೇಕೆರೂರು ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬನ್ನಿಕೋಡ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಬನ್ನಿಕೋಡ ಅವರನ್ನು ಬಿಜೆಪಿಗೆ ಕರೆತರಲು B.C.ಪಾಟೀಲ್ ಕಸರತ್ತು ನಡೆಸಿದ್ದಾರೆ. ಇದಕ್ಕೆ ಪೂಕರವೆಂಬಂತೆ ಸಚಿವ B.C.ಪಾಟೀಲ್ ಬನ್ನಿಕೋಡ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ರಿವರ್ಸ್ ಭೀತಿ ಶುರುವಾಗಿದೆ. ಬಳಿಕ ಹಿರೇಕೆರೂರಿನಲ್ಲಿ ಮಾತನಾಡಿದ ಸಚಿವ B.C.ಪಾಟೀಲ್, ಬನ್ನಿಕೋಡ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದಾರೆ, 2018ರಲ್ಲಿ ಒಟ್ಟಿಗೆ ಕಾಂಗ್ರೆಸ್ನಿಂದ ಚುನಾವಣೆ ಎದುರಿಸಿದ್ವಿ, ನಾನು ಪಕ್ಷ ಬಿಟ್ಟು ಬರುವಾಗ ಕರೆದಿದ್ದೆ ಅವರು ಬರಲಿಲ್ಲ. ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸಿ ಚುನಾವಣೆ ಮಾಡೋಣ, ಅಭಿವೃದ್ಧಿಗೆ ನಾಂದಿ ಹಾಡೋಣ ಎಂದು ಕೇಳಿಕೊಂಡಿದ್ದೇನೆ, ಪಕ್ಷಕ್ಕೆ ಬರುತ್ತಾರೆ ಎಂದು ಆಶಾದಾಯಕವಾಗಿದ್ದೇನೆ ಎಂದು B.C. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ರು.