Publish Date: Mon, 16 Oct 2017 (10:24 IST)
Updated Date: Mon, 16 Oct 2017 (10:26 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ರೇಖಾ ಚಿತ್ರವನ್ನು ಪೊಲೀಸರು ಮೊನ್ನೆಯಷ್ಟೇ ಬಿಡುಗಡೆ ಮಾಡಿದ್ದರು. ಆದರೆ ಮೂರು ರೇಖಾ ಚಿತ್ರಗಳ ಪೈಕಿ ಒಂದು ಇದೀಗ ಶಾಸಕ ಬಿ ಸುರೇಶ್ ಗೌಡ ಆಪ್ತ ಸಹಾಯಕನಿಗೆ ಸಂಕಷ್ಟ ತಂದಿಟ್ಟಿದೆ.
ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ಅವರ ಆಪ್ತ ಸಹಾಯಕ ಪ್ರಭಾಕರ್ ಅವರ ಚಹರೆಗೂ ಈ ರೇಖಾ ಚಿತ್ರದಲ್ಲಿರುವ ಓರ್ವ ಶಂಕಿತನ ಚಿತ್ರಕ್ಕೂ ಸಾಮ್ಯತೆಯಿದೆ. ಪ್ರಭಾಕರ್ ರಂತೆ ಶಂಕಿತನ ಚಿತ್ರದಲ್ಲೂ ಮುಖಕ್ಕೆ ಕುಂಕುಮ ಇಟ್ಟುಕೊಳ್ಳಲಾಗಿದೆ.
ಇದೀಗ ಪ್ರಭಾಕರ್ ಗೆ ಸಂಕಷ್ಟ ತಂದಿಟ್ಟಿದೆ. ನನಗೆ ಸಂಬಂಧವೇ ಇಲ್ಲದ ಪ್ರಕರಣವೊಂದರ ಬಗ್ಗೆ ಜನ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಉತ್ತರ ಕೊಟ್ಟು ಸಾಕಾಗಿದೆ ಎಂದು ಪ್ರಭಾಕರ್ ತಮ್ಮ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಯಾರೋ ಬೇಕೆಂದೇ ನನ್ನ ತೇಜೋವಧೆಗೆ ಈ ರೀತಿ ಮಾಡಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ